ಒಣ ದ್ರಾಕ್ಷಿ ದಿನನಿತ್ಯ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಒಣದ್ರಾಕ್ಷಿ ತಿಂದ ತಕ್ಷಣವೇ ದೇಹವು ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಯಾಕೆಂದರೆ ಇದರಲ್ಲಿ ವಿಟಮಿನ್, ಖನಿಜ, ಆಂಟಿಆಕ್ಸಿಡೆಂಟ್ ಗಳು ಹೇರಳವಾಗಿದ್ದು, ಮಕ್ಕಳು ಮತ್ತು ದೈಹಿಕ ಕ್ಷಮತೆಯ ಕೊರತೆ ಎದುರಿಸುತ್ತಿರುವ ವ್ಯಕ್ತಿಗಳು ಇದನ್ನು ಸೇವಿಸಬೇಕು. ದೇಹದ ರೋಗನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಒಣದ್ರಾಕ್ಷಿ ಸೇವನೆಯಿಂದ ರಕ್ತನಾಳಗಳು ಪ್ರಚೋದಿಸಲ್ಪಟ್ಟು ಚಟುವಟಿಕೆ ಭರಿತವಾಗುತ್ತವೆ. 100 ಗ್ರಾಂ ಒಣದ್ರಾಕ್ಷಿಯಲ್ಲಿ ಶೇಕಡ 10 ಪ್ರಮಾಣದಲ್ಲಿ ನಾರು ಇರುತ್ತದೆ. ಇದು ದೇಹದ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಕೊಲೆಸ್ಟರಾಲ್ ಪ್ರಮಾಣ ಇಳಿಸಲು ನೆರವು ನೀಡುತ್ತದೆ. ಒಣ ದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಷಿಯಂ, ತಾಮ್ರ, ಸತು ಮೊದಲಾದ ಖನಿಜಾಂಶಗಳು ದೊಡ್ಡ ಪ್ರಮಾಣದಲ್ಲಿರುತ್ತದೆ. 100 ಗ್ರಾಂ ಒಣದ್ರಾಕ್ಷಿಯಲ್ಲಿ 49 ಮಿಲಿಗ್ರಾಂ ಪೊಟಾಶಿಯಂ ಇರುತ್ತದೆ. ಇದು ಹೃದ್ರೋಗ ತಡೆಯುವುದು ಮಾತ್ರವಲ್ಲ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ವಿಟಮಿನ್ ಡಿ ಕೊರತೆಯಿದ್ದರೆ ಒಣದ್ರಾಕ್ಷಿ ಸೇವನೆಯಿಂದ ಸರಿಹೋಗುತ್ತದೆ. ಇನ್ನೂ ಥಯಾಮಿನ್, ರೈಬೋಫ್ಲೇವಿನ್ ಕೂಡ ದೇಹಕ್ಕೆ ಇದರಿಂದ ದೊರಕುತ್ತದೆ. ದ್ರಾಕ್ಷಿಯನ್ನು ನೆನೆಸಿದ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಅನೇಕ ಸಮಸ್ಯೆಗಳನ್ನು ಗುಣಪಡಿಸಬಹುದು. ಇದರ ಉರಿಯೂತ ನಿವಾರಕ ಗುಣಲಕ್ಷಣಗಳು ನಮ್ಮ ಕರುಳಿನ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ ಮತ್ತು ಕರುಳಿನಲ್ಲಿರುವ ಬ್ಯಾಕ್ಟೀರಿಯಾವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಪ್ರತಿದಿನ ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿಯನ್ನು ತಿನ್ನಿ, ಜೊತೆಗೆ ನೀರನ್ನು ಕುಡಿಯಿರಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು. ದೇಹದಲ್ಲಿರುವ ವಿಷವನ್ನು ತೆಗೆದುಹಾಕುತ್ತದೆ: ಒಣ ದ್ರಾಕ್ಷಿಯನ್ನು ನೆನೆಸಿದ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಕನಿಷ್ಠ ಒಂದು ವಾರದವರೆಗೆ ಈ ನೀರನ್ನು ಕುಡಿಯುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಆಗಬಹುದು. ಇದು ನಿಮ್ಮ ಯಕೃತ್ತನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅದರ ಕಾರ್ಯವನ್ನು ಹೆಚ್ಚಿಸುತ್ತದೆ.
