ಒಣ ದ್ರಾಕ್ಷಿ ದಿನನಿತ್ಯ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಒಣದ್ರಾಕ್ಷಿ ತಿಂದ ತಕ್ಷಣವೇ ದೇಹವು ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಯಾಕೆಂದರೆ ಇದರಲ್ಲಿ ವಿಟಮಿನ್, ಖನಿಜ, ಆಂಟಿಆಕ್ಸಿಡೆಂಟ್ ಗಳು ಹೇರಳವಾಗಿದ್ದು, ಮಕ್ಕಳು ಮತ್ತು ದೈಹಿಕ ಕ್ಷಮತೆಯ ಕೊರತೆ ಎದುರಿಸುತ್ತಿರುವ ವ್ಯಕ್ತಿಗಳು ಇದನ್ನು ಸೇವಿಸಬೇಕು. ಅಂತಹವರು ಎಷ್ಟು ಸಾಧ್ಯವೋ ಅಷ್ಟು ಒಣದ್ರಾಕ್ಷಿಗಳನ್ನು ತಿನ್ನಬೇಕು. ಅಷ್ಟೇ ಅಲ್ಲದೆ ಕ್ಯಾನ್ಸರ್ ಕಾರಕ ಜೀವಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಇದು ಹೊಂದಿದ್ದು, ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ವೈರಸ್ ಮತ್ತು ಫಂಗಸ್ ಸೋಂಕಿನ ವಿರುದ್ಧ ಕೂಡ ಇದು ದೇಹಕ್ಕೆ ರಕ್ಷಣೆ ನೀಡುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಒಣದ್ರಾಕ್ಷಿ ಸೇವನೆಯಿಂದ ರಕ್ತನಾಳಗಳು ಪ್ರಚೋದಿಸಲ್ಪಟ್ಟು ಚಟುವಟಿಕೆ ಭರಿತವಾಗುತ್ತವೆ. 100 ಗ್ರಾಂ ಒಣದ್ರಾಕ್ಷಿಯಲ್ಲಿ ಶೇಕಡ 10 ಪ್ರಮಾಣದಲ್ಲಿ ನಾರು ಇರುತ್ತದೆ. ಇದು ದೇಹದ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ಕೊಲೆಸ್ಟ್ರಾಲ್ ಪ್ರಮಾಣ ಇಳಿಸಲು ನೆರವು ನೀಡುತ್ತದೆ. ಒಣ ದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಮೆಗ್ನಿಷಿಯಂ, ತಾಮ್ರ, ಸತು ಮೊದಲಾದ ಖನಿಜಾಂಶಗಳು ದೊಡ್ಡ ಪ್ರಮಾಣದಲ್ಲಿರುತ್ತದೆ. 100 ಗ್ರಾಂ ಒಣದ್ರಾಕ್ಷಿಯಲ್ಲಿ 49 ಮಿಲಿಗ್ರಾಂ ಪೊಟಾಶಿಯಂ ಇರುತ್ತದೆ. ಇದು ಹೃದ್ರೋಗ ತಡೆಯುವುದು ಮಾತ್ರವಲ್ಲ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ವಿಟಮಿನ್ ಡಿ ಕೊರತೆಯಿದ್ದರೆ ಒಣದ್ರಾಕ್ಷಿ ಸೇವನೆಯಿಂದ ಸರಿಹೋಗುತ್ತದೆ. ಇನ್ನೂ ಥಯಾಮಿನ್, ರೈಬೋಪ್ಲೇವಿನ್ ಕೂಡ ದೇಹಕ್ಕೆ ಇದರಿಂದ ದೊರಕುತ್ತದೆ.
