ನವದೆಹಲಿ: ಈ ವಾರಾಂತ್ಯದ ಪ್ಯಾರಿಸ್ 2024 ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಮೊದಲು, 142ನೇ ಐಒಸಿ ಅಧಿವೇಶನದಲ್ಲಿ ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ನೀತಾ ಅಂಬಾನಿ ಅವರು ಭಾರತದಿಂದ ಐಒಸಿ ಸದಸ್ಯರಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಬುಧವಾರ ಪ್ರಕಟಿಸಿದೆ. ಪ್ರಸ್ತುತ ನಡೆಯುತ್ತಿರುವ ಪ್ಯಾರಿಸ್‌ನಲ್ಲಿ 100% ಮತಗಳೊಂದಿಗೆ ಸರ್ವಾನುಮತದಿಂದ ಗೆದ್ದಿದ್ದಾರೆ.
