ತುಳುನಾಡು, ಕರಾವಳಿ ಎಂದಾಕ್ಷಣ ಥಟ್ ಅಂತಾ ನೆನಪಾಗೋದೇ ಬೇಸಾಯ, ದೈವಾರಾಧನೆ, ಭೂತ ಕೋಲ, ಕಂಬಳ . ಇದರಲ್ಲಿ ಕಂಬಳ ಎಂಬುದು ಕರಾವಳಿ ಭಾಗದ ಅತ್ಯಂತ ಪುರಾತನ ಗ್ರಾಮೀಣ ಕ್ರೀಡೆ ಅನ್ನೋದು ಹಲವರಿಗೆ ತಿಳಿದಿರುವ ವಿಚಾರ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಒಂದು ಜಾನಪದ ಕ್ರೀಡೆಯಾಗಿದೆ.
ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪಿಲಿಕುಳ ನಿಸರ್ಗಧಾಮದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲು ಉದ್ದೇಶಿಸಿದ್ದ ಪಿಲಿಕುಳ ಕಂಬಳೋತ್ಸವವನ್ನು ಮುಂದೂಡಲಾಗಿದ್ದು, ಕಂಬಳ ತಾಂತ್ರಿಕ ತೊಡಕು ಉಂಟಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಹತ್ತು ವರುಷಗಳ ಬಳಿಕ ಜಿಲ್ಲಾಡಳಿತ ವತಿಯಿಂದ ಕಂಬಳ ಹಮ್ಮಿಕೊಳ್ಳಲಾಗಿದ್ದು, ಈ ಕಂಬಳಕ್ಕೆ ಕಾನೂನು ತೊಡಕು ಉಂಟಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಪ್ರಾಣಿ ಸಂಗ್ರಹಾಲಯದ ಸಮೀಪ ಕಂಬಳ ನಡೆಸುವುದರಿಂದ ವನ್ಯಜೀವಿಗಳಿಗೆ ತೊಂದರೆಯಾಗಲಿದೆ ಎಂದು ಪ್ರಾಣಿ ಪ್ರಿಯರು ಕಂಬಳಕ್ಕೆ ತಡೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದು, ಕರಾವಳಿ, ಮಲೆನಾಡು ಅಷ್ಟೇ ಅಲ್ಲದೇ ಬೆಂಗಳೂರು ಕಂಬಳಕ್ಕೂ ತಾಂತ್ರಿಕ ತೊಡಕು ಉಂಟಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.