ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಇದೀಗ ಟಾಟ್ಯೂವೊಂದನ್ನು ಹಾಕಿಸಿಕೊಂಡು ಟ್ರೆಂಡಿಂಗ್ನಲ್ಲಿ ಇದ್ದಾರೆ.
ಹೌದು, ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನೂ ಟಾಟ್ಯೂ ನೋಡಿದ ಅಭಿಮಾನಿಗಳು ಏನಿದು ಅಂತ ತಲೆ ಕೆಡಿಸಿಕೊಂಡಿದ್ದಾರೆ.
ಸಾನ್ವಿ ಸುದೀಪ್ ಅವರು ಕತ್ತಿನಲ್ಲಿ PIKU ಅಂತ ಟಾಟ್ಯೂ ಹಾಕಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರ ತಂದೆ ಸಂಜೀವ್ ಮಂಜಪ್ಪ ಅವರು ಸಾನ್ವಿಯನ್ನು ಪ್ರೀತಿಯಿಂದ ಪೀಕು ಅಂತ ಕರೆಯುತ್ತಾರಂತೆ.
ಹೀಗಾಗಿ ಅದೇ ಹೆಸರನ್ನು ಸಾನ್ವಿ ಅವರು ತಮ್ಮ ಕತ್ತಿನ ಮೇಲೆ PIKU ಅಂತ ಟಾಟ್ಯೂ ಹಾಕಿಸಿಕೊಂಡಿದ್ದಾರಂತೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.