ಕನ್ನಡಿಗರಿಗೆ ಸಂತಸದ ಸುದ್ದಿ – ರೈಲ್ವೆ ನೇಮಕಾತಿ ; ಕನ್ನಡ ಸೇರಿ 13 ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ

ಬೆಂಗಳೂರು : ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಎರಡು ಹಂತಗಳ ಕಂಪ್ಯೂಟರ್ ಆಧರಿತ ಪರೀಕ್ಷೆಯನ್ನು ಕನ್ನಡ, ಕೊಂಕಣಿ ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಭಾರತೀಯ ರೈಲ್ವೆ ಅವಕಾಶ ನೀಡಿದೆ.

ಈಗ ಟೆಕ್ನಿಷಿಯನ್ ಗಳ ನೇಮಕಾತಿಗೆ ಪರೀಕ್ಷೆಗೂ ಈ ನಿಯಮ ಅನ್ವಯಿಸಲಾಗಿದೆ. ಇಂಗ್ಲೀಷ್, ಹಿಂದಿ ಮಾತ್ರವಲ್ಲದೆ, ಕನ್ನಡ, ಕೊಂಕಣಿ, ತಮಿಳು, ತೆಲುಗು, ಮಲಯಾಳಂ ಸೇರಿ 13 ಭಾಷೆಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದು. ಈ ವರ್ಷ ಗ್ರೇಡ್ -1 ಮತ್ತು ಗ್ರೇಡ್ -3 ವೃಂದದ 9144 ಟೆಕ್ನಿಷಿಯನ್ ಗಳ ನೇಮಕಾತಿ ಮಾಡಿಕೊಳ್ಳಲಾಗುವುದು. ಒಟ್ಟು ಹುದ್ದೆಗಳಲ್ಲಿ ರಾಜ್ಯದ ನೈರುತ್ಯ ರೈಲ್ವೆಗೆ 426 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಪದವಿ, ಐಟಿಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement