ಕನ್ನಡ ಕಡ್ಡಾಯ ನಾಮಫಲಕ ಅಳವಡಿಕೆಗೆ ನೀಡಿದ್ದ ಡೆಡ್‌ಲೈನ್ ಇವತ್ತು ಮುಗಿಯುತ್ತದೆ. ಹೊಸ ಕಾಯ್ದೆ ಬಂದಿರುವ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವ್ಯಾಪಾರಸ್ಗರು- ಉದ್ದಿಮೆಗಳು ಹಳೇ ನಾಮಫಲಕ ತೆಗೆದು ಹೊಸ ನಾಮಫಲಕ ಹಾಕಿದ್ದಾರೆ.
ಕರ್ನಾಟಕದಲ್ಲಿ ಕನ್ನಡವನ್ನು ನಿರ್ಲಕ್ಷಿಸುತ್ತಿರುವ ಹಿನ್ನಲೆಯಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪರಿಣಾಮವಾಗಿ, ಸರ್ಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ(ತಿದ್ದುಪಡಿ) ಅಧಿನಿಯಮ-2024 ವಿಧೇಯಕವನ್ನು ಮಂಡಿಸಿ ಅದು ಈಗ ರಾಜ್ಯಪಾಲರ
ಅಂಕಿತದೊಂದಿಗೆ ಕಾನೂನು ಆಗಿ ಜಾರಿಯಾಗಿದೆ.