ಬೆಂಗಳೂರು: ಕನ್ನರಾಮಯ್ಯ ಸರ್ಕಾರ ರಾಜ್ಯದ ಲೂಟಿಗೆ ನಿಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದು ಬಡವರ ವಿರೋಧಿಸರಕಾರ. ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡುತ್ತಿರುವ 5ಕೆಜಿ ಅಕ್ಕಿಯಲ್ಲೂ ಕಡಿತ ಮಾಡಿ ತನ್ನ ಜೇಬು ತುಂಬಿಸಿಕೊಳ್ಳುವ ಮೂಲಕ ಕನ್ನರಾಮಯ್ಯ ಸರ್ಕಾರ ರಾಜ್ಯದ ಲೂಟಿಗೆ ನಿಂತಿದೆ. ಕೊಟ್ಟ ಭರವಸೆ ಪೂರೈಸುವ ಯೋಗ್ಯತೆ ಇಲ್ಲದೆ, ಈಗ ಕೇಂದ್ರ ನೀಡುವ ಅಕ್ಕಿಯನ್ನೂ ಜನರಿಗೆ ನೀಡದೆ ವಂಚಿಸುತ್ತಿದೆ ಈ ಎಟಿಎಂ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿನ ಎಟಿಎಂ ಸರ್ಕಾರದಲ್ಲಿ ಜನರ ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲ.ಈಗ ರಾಜ್ಯದ ಹೆಂಗಸರು ಮಕ್ಕಳಿಗೆ ಪೋಷಕಾಂಶ ಹೆಚ್ಚಳಕ್ಕಾಗಿ ನೀಡುವ ಮೊಟ್ಟೆಯಲ್ಲೂ ಕಮಿಷನ್ ತಿಂದು ಕೊಳೆತ ಮೊಟ್ಟೆ ನೀಡುತ್ತಾ ಅವರ ಆರೋಗ್ಯಕ್ಕೂ ಕುತ್ತು ತಂದಿದೆ ಸರ್ಕಾರ. ಇಲ್ಲಿ ಮೊಟ್ಟೆ ಮಾತ್ರವಲ್ಲ, ಸರ್ಕಾರದ ವ್ಯವಸ್ಥೆಯೂ ಕೊಳೆತಿದೆ ಎಂದು ಟೀಕಿಸಿದ್ದಾರೆ.