ವಾಷಿಂಗ್ಟನ್: ಭಾರತ ಮೂಲದ ಅಮೆರಿಕ ಉಪಾಧ್ಯಕ್ಷೆ, ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ವಿರುದ್ಧ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಾಂಗೀಯ ದಾಳಿ ನಡೆಸಿದ್ದಾರೆ. ಈ ಪೈಕಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರಂಪ್, ಕಮಲಾ ಹ್ಯಾರಿಸ್ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ..ಕಮಲಾ ಹ್ಯಾರಿಸ್ ಅವರು ಕಪ್ಪು ವರ್ಣೀಯರೋ ಅಥವಾ ಭಾರತೀಯ ಮೂಲದವರೋ? ಇದು ಡೊನಾಲ್ಡ್ ಟ್ರಂಪ್ ಪ್ರಶ್ನೆಯಾಗಿದೆ.. ಕೆಲವು ವರ್ಷಗಳ ಹಿಂದೆ ನನಗೆ ಆಕೆ ಕಪ್ಪು ಮಹಿಳೆ ಎಂದು ಗೊತ್ತಿರಲಿಲ್ಲ. ಆದರೆ ಇದೀಗ ಆಕೆ ತಮ್ಮನ್ನು ತಾವು ಕಪ್ಪು ಮಹಿಳೆ ಎಂದು ಗುರುತಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಿರುವ ಡೊನಾಲ್ಡ್ ಟ್ರಂಪ್, ಆಕೆಯನ್ನು ತಾವು ಏಷ್ಯನ್ – ಅಮೆರಿಕನ್ ಎಂದು ಭಾವಿಸಿದ್ದಾಗಿ ತಿಳಿಸಿದರು. ಶಿಕಾಗೋ ನಗರದಲ್ಲಿ ಕಪ್ಪು ವರ್ಣೀಯ ಪತ್ರಕರ್ತರ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಆಗಿರುವ ಕಮಲಾ ಹ್ಯಾರಿಸ್ ಕುರಿತಾಗಿ ಆಡಿರುವ ಮಾತುಗಳು, ವರ್ಣಭೇದ ಧೋರಣೆಯಿಂದ ಕೂಡಿವೆ ಹಾಗೂ ಜನಾಂಗೀಯ ನಿಂದನಾತ್ಮಕವಾಗಿವೆ ಎಂದು ಆಕ್ರೋಶ ವ್ಯಕ್ತವಾಗಿದೆ.