ಬೆಂಗಳೂರು: 2023-24ನೇ ಸಾಲಿಗೆ ಕೇಂದ್ರ ಸರ್ಕಾರದಿಂದ ಕಬ್ಬು ನುರಿಯುವ ಹಂಗಾಮಿಗೆ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ರೂ.3,150ಕ್ಕೆ ನಿಗದಿ ಪಡಿಸಿದೆ.
ಎಫ್ ಆರ್ ಸಿ ನಿಗದಿಯಿಂದ ಕಬ್ಬು ಬೆಳೆಗಾರರ ಆರ್ಥಿಕ ಸ್ಥಿತಿ ಸುಧಾರಿಸಲು ಅನುಕೂಲವಾಗಲಿದೆ ಎಂಬುದಾಗಿ ಕೇಂದ್ರ ಸರ್ಕಾರ ಅಭಿಪ್ರಾಯ ವ್ಯಕ್ತ ಪಡಿಸಿದೆ.
2023-24ನೇ ಸಾಲಿನಲ್ಲಿ ಕಬ್ಬು ನುರಿಯುವ ಹಂಗಾಮು ಆರಂಭಕ್ಕೆ 20 ದಿನ ಮಾತ್ರ ಬಾಕಿ ಇದ್ದು. 2023-24ರ ಸಕ್ಕರೆ ಹಂಗಾಮಿಗೆ ನಿಗದಿಪಡಿಸಿರುವ ಎಫ್ಆರ್ ಪಿಯು ಕಳೆದ ಸಾಲಿನ ಸಕ್ಕರೆ ಹಂಗಾಮಿಗಿಂತ ಶೇ.3.28 ಅಧಿಕವಾಗಿದೆ.
ಸಕ್ಕರೆ ವಲಯವು ದೇಶದ ಪ್ರಮುಖ ಕೃಷಿ ಆಧಾರಿತ ವಲಯವಾಗಿದೆ. ಇದು ದೇಶದ 5 ಕೋಟಿ ಕಬ್ಬು ಬೆಳೆಗಾರರು ಮತ್ತು ಅವರ ಅವಲಂಬಿತರು ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ನೇರವಾಗಿ ಕಾರ್ಯನಿರ್ವಹಿಸುವ ಅಂದಾಜು 5 ಲಕ್ಷ ಕಾರ್ಮಿಕರ ಜೀವನೋಪಾಯದ ಮೇಲೆ ಪರಿಣಾಮ ಬೀರಲಿದೆಯಂತೆ.