ಮಾಸ್ಕೊ : ಯುವತಿಯೊಬ್ಬಳು ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿದ್ದ ಕಪ್ಪು ಬೆಕ್ಕಿನ ಮರಿಯನ್ನು ಮನೆಗೆ ತಂದಿದ್ದಾಳೆ. ಆದರೆ ಸ್ವಲ್ಪ ಸಯಮದ ನಂತರ ಅದು ಸಾಕು ಪ್ರಾಣಿಯಲ್ಲ ಕಾಡು ಪ್ರಾಣಿ ಅಂತ ಗೊತ್ತಾಗಿದೆ. ಕರಿ ಬೆಕ್ಕು ಅಂತ ತಂದಿದ್ದು, ಕೊನೆಗೆ ಗೊತ್ತಾಗಿದ್ದು ಕರಿ ಚಿರತೆ ಅಂತ.
ಈ ಘಟನೆ ನಡೆದಿದ್ದು ಮಾಸ್ಕೋದಲ್ಲಿ ರಷ್ಯಾ ಮೂಲದ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿದ್ದ ಚಿರತೆ ಮರಿಯನ್ನು ಬೆಕ್ಕಿನ ಮರಿಯೆಂದು ತಿಳಿದು ಮನೆಗೆ ತಂದು ಸಾಕಿದ್ದಾರೆ. ಮರಿ ಬೆಳೆದು ದೊಡ್ಡದಾದಂತೆ ಅದು ಕಪ್ಪು ಚಿರತೆ ಎಂದು ಗೊತ್ತಾಗಿದೆ.
ಮಹಿಳೆ ಚಿರತೆ ಮರಿಯನ್ನು ತರುವ ಮತ್ತು ಅದರ ಬೆಳವಣಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಎಲ್ಲೆಡೆ ಹರಿದಾಡುತ್ತಿದೆ. ವಿಡಿಯೊದಲ್ಲಿ ಮಹಿಳೆ ಮತ್ತು ಆಕೆ ಸಾಕಿದ ನಾಯಿ ಹಾಗೂ ಚಿರತೆಯ ನಡುವಿನ ಬಾಂಧವ್ಯದ ದೃಶ್ಯಗಳಿವೆ. ಈಗಾಗಲೇ ವಿಡಿಯೊ ಹಂಚಿಕೊಂಡಾಗಿನಿಂದ 9.1 ಮಿಲಿಯನ್ ವೀಕ್ಷಣೆ ಪಡೆದಿದ್ದು, 14 ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ಅಲ್ಲದೆ ಪ್ರಾಣಿಯನ್ನು ರಕ್ಷಿಸಿದ್ದಕ್ಕೆ ಹಲವರು ಅಭಿನಂದಿಸಿ ಕಾಮೆಂಟ್‌ಗಳನ್ನೂ ಮಾಡಿದ್ದಾರೆ.