ಯಾವ್ಯಾವ ಭಾಗಗಳಿಂದ ವಿಶೇಷ ರೈಲು
* ರೈಲು ಸಂಖ್ಯೆ 15024-ವೈಪಿಆರ್ ಜಿಕೆಪಿ ಎಕ್ಸ್‌ಪ್ರೆಸ್ – ಈ ರೈಲು ಪ್ರತಿ ಗುರುವಾರ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11:40ಕ್ಕೆ ನಿರ್ಗಮಿಸಿ ಮರು ದಿನ ಸಂಜೆ 4:25ಕ್ಕೆ ಅಯೋಧ್ಯೆಗೆ ತಲುಪುತ್ತದೆ. 1 ದಿನ 16 ಗಂಟೆ, 45 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. 820 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭವಾಗುತ್ತದೆ. ದೂರ 1,608 ಕಿಲೋ ಮೀಟರ್ ಆಗುತ್ತದೆ.
* ರೈಲು ಸಂಖ್ಯೆ 22534 – ವೈಪಿಆರ್ (ಯಶವಂತಪುರ) ಜಿಕೆಪಿ (ಗೋರಖ್‌ಪುರ) ಎಕ್ಸ್‌ಪ್ರೆಸ್ – ಈ ರೈಲು ಪ್ರತಿ ಬುಧವಾರ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11:40ಕ್ಕೆ ಹೊರಟು, ಮರು ದಿನ ಸಂಜೆ 3:50ಕ್ಕೆ ಗೋಂಡಾ (ಇಲ್ಲಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ತಲುಪುತ್ತದೆ. 1 ದಿನ 16 ಗಂಟೆ, 10 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. 855 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭ ಆಗುತ್ತದೆ. ದೂರ 1,641 ಕಿಲೋ ಮೀಟರ್ ಆಗುತ್ತದೆ.
* ರೈಲು ಸಂಖ್ಯೆ 12592 – ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲು ಪ್ರತಿ ಸೋಮವಾರ ಬೆಂಗಳೂರಿನ ಯಶವಂತಪುರದಿಂದ ಬೆಳಗ್ಗೆ 5:20ಕ್ಕೆ ಹೊರಟು ಮರುದಿನ ಮಧ್ಯಾಹ್ನ 12.52ಕ್ಕೆ ಮಂಕಾಪುರಕ್ಕೆ (ಇಲ್ಲಿಂದ ಅಯೋಧ್ಯೆಗೆ 28 ಕಿಲೋ ಮೀಟರ್) ತಲುಪಲಿದೆ. 1 ದಿನ 19 ಗಂಟೆ, 32 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. 865 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭ ಆಗುತ್ತದೆ. ದೂರ 1,636 ಕಿಲೋ ಮೀಟರ್ ಆಗುತ್ತದೆ.
* ರೈಲು ಸಂಖ್ಯೆ 01667 – ಯಶ್ವಂತಪುರ ಎರ್ನಾಕುಲಂ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಯಶವಂತಪುರದಿಂದ ರಾತ್ರಿ 11:30ಕ್ಕೆ ಹೊರಟು ಮರುದಿನ ಸುಲ್ತಾನ್‌ಪುರಕ್ಕೆ ಬೆಳಗ್ಗೆ 5:30ಕ್ಕೆ ತಲುಪಲಿದೆ. (ಇಲ್ಲಿಂದ ಅಯೋಧ್ಯೆಗೆ 60 ಕಿಲೋ ಮೀಟರ್). ರೈಲು ಸಂಚಾರ ಮಾರ್ಗದ ದೂರ 1,549 ಕಿಲೋ ಮೀಟರ್ ಆಗಲಿದೆ. ಗಮನಿಸಿ ಈ ರೈಲು ಪ್ರಸ್ತುತ ಚಾಲನೆಯಲ್ಲಿ ಇಲ್ಲ.
* ರೈಲು ಸಂಖ್ಯೆ 05016 – ಯಶ್ವಂತಪುರ ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲು ಪ್ರತಿ ಬುಧವಾರ ಯಶವಂತಪುರ ರೈಲ್ವೆ ನಿಲ್ದಾಣದಿಂದ ರಾತ್ರಿ 11:40ಕ್ಕೆ ನಿರ್ಗಮಿಸಲಿದ್ದು, ಮರುದಿನ ಮಧ್ಯಾಹ್ನ 3:50ಕ್ಕೆ ಗೋಂಡಾ ರೈಲು ನಿಲ್ದಾಣ (ಇಲ್ಲಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ತಲುಪಲಿದೆ. ರೈಲು ಸಂಚಾರ ಮಾರ್ಗದ ಅಂತರ 1,641 ಕಿಲೋ ಮೀಟರ್ ಆಗಲಿದೆ.
* ರೈಲು ಸಂಖ್ಯೆ 05024 – ಜಿಕೆಪಿ ಫೆಸ್ಟ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಪ್ರತಿ ಗುರುವಾರ ಬೆಂಗಳೂರಿನ ಯಶವಂತಪುರದಿಂದ ರಾತ್ರಿ 11:40ಕ್ಕೆ ಹೊರಟು ಮರು ದಿನ ಸಂಜೆ 4:26ಕ್ಕೆ ಅಯೋಧ್ಯೆ ತಲುಪಲಿದೆ. 1 ದಿನ 16 ಗಂಟೆ, 46 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ರೈಲು ಸಂಚಾರ ಮಾರ್ಗದ ಅಂತರ 1,608 ಕಿಲೋ ಮೀಟರ್ ಆಗಲಿದೆ.
* ರೈಲು ಸಂಖ್ಯೆ 02592 – ವೈಪಿಆರ್ ಜೆಕೆಪಿ ಎಕ್ಸ್‌ಪ್ರೆಸ್ ರೈಲು ಪ್ರತಿ ಸೋಮವಾರ ಬೆಂಗಳೂರಿನ ಯಶವಂತಪುರದಿಂದ ಸಂಜೆ 5:20ಕ್ಕೆ ಹೊರಟು ಮರು ದಿನ ಮಧ್ಯಾಹ್ನ 1.17ಕ್ಕೆ ಮಂಕಾಪುರ (ಇಲ್ಲಿಂದ ಅಯೋಧ್ಯೆಗೆ 28 ಕಿಲೋ ಮೀಟರ್) ತಲುಪಲಿದೆ. 1 ದಿನ 19 ಗಂಟೆ, 57 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ರೈಲು ಸಂಚಾರ ಮಾರ್ಗದ ಅಂತರ 1,636 ಕಿಲೋ ಮೀಟರ್ ಆಗಲಿದೆ.
* ರೈಲು ಸಂಖ್ಯೆ 06593 – ವೈಪಿಆರ್ ಎನ್‌ಝೆಡ್‌ಎಂ ಎಕ್ಸ್‌ಪ್ರೆಸ್ ರೈಲು ಪ್ರತಿ ಭಾನುವಾರ ಬೆಂಗಳೂರಿನ ಯಶವಂತಪುರದಿಂದ ಸಂಜೆ 5:20ಕ್ಕೆ ಹೊರಟು ಮರು ದಿನ ಸಂಜೆ 5:13ಕ್ಕೆ ಮಂಕಾಪುರ (ಇಲ್ಲಿಂದ ಅಯೋಧ್ಯೆಗೆ 28 ಕಿಲೋ ಮೀಟರ್) ತಲುಪಲಿದೆ. 1 ದಿನ 23 ಗಂಟೆ, 53 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ರೈಲು ಸಂಚಾರ ಮಾರ್ಗದ ಅಂತರ 1,636 ಕಿಲೋ ಮೀಟರ್ ಆಗಲಿದೆ.
* ರೈಲು ಸಂಖ್ಯೆ 15016 ವೈಎಲ್‌ಕೆ (ಯಲಹಂಕ) ಗೋರಖ್‌ಪುರ್ ಎಕ್ಸ್‌ಪ್ರೆಸ್ ಪ್ರತಿ ಗುರುವಾರ ಬೆಳಗ್ಗೆ 7:45ಕ್ಕೆ ಯಲಹಂಕ ರೈಲು ನಿಲ್ದಾಣದಿಂದ ಹೊರಟು ಎರಡನೇ ದಿನದ ಬೆಳಗ್ಗೆ 10:35ಕ್ಕೆ ಗೋಂಡ ರೈಲು ನಿಲ್ದಾಣ ತಲುಪುತ್ತದೆ. (ಈ ನಿಲ್ದಾಣದಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ಈ ರೈಲು 2 ದಿನ 2 ಗಂಟೆ 50 ನಿಮಿಷ ಸಮಯವನ್ನು ತೆಗೆದುಕೊಳ್ಳುತ್ತದೆ. 1,629 ಅಂತರ ಇರಲಿದೆ.
ಸದ್ಯ ಇಷ್ಟು ರೈಲುಗಳು ಬೆಂಗಳೂರಿನಿಂದ ಅಯೋಧ್ಯೆಗೆ ಸಂಚಾರಿಸುತ್ತಿವೆ. 2023ರ ಫೆಬ್ರವರಿಯಿಂದ ಅಯೋಧ್ಯೆಗೆ ಕರ್ನಾಟಕದ ಇತರೆ ಭಾಗಗಳಿಂದಲೂ ರೈಲು ಸೇವೆ ಆರಂಭಿಸುವುದಾಗಿ ನೈಋತ್ಯ ರೈಲ್ವೆ ಮೂಲಗಳು ತಿಳಿಸಿವೆ. ಈ 11 ರೈಲುಗಳ ಪೈಕಿ ಬೆಂಗಳೂರಿನಿಂದ 3, ಮೈಸೂರು, ಹುಬ್ಬಳ್ಳಿ ಹಾಗೂ ಮಂಗಳೂರಿನಿಂದ ತಲಾ 2, ಶಿವಮೊಗ್ಗ, ಬೆಳಗಾವಿಯಿಂದ ತಲಾ 1 ರೈಲು ಅಯೋಧ್ಯೆಗೆ ಹೊರಡಲಿವೆ. ದಿನಾಂಕ, ಸಮಯ ಹಾಗೂ ದರಗಳನ್ನು ಇನ್ನಷ್ಟೇ ನಿಗದಿ ಮಾಡಬೇಕು ಎಂದು ಐಆರ್‌ಸಿಟಿಸಿ ಮಾಹಿತಿ ನೀಡಿದೆ.