ಪುತ್ತೂರು: ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಗೆ ಅಪ್ರಮೇಯ ಪಿ. ಎನ್ ಎಂಬ ಪುತ್ತೂರಿನ ಎರೂಡುವರೆ ವರ್ಷದ ಪುಟ್ಟ ಕಂದ ಆಯ್ಕೆಯಾಗಿದ್ದಾನೆ. ತನ್ನ ಅಪಾರ ಜ್ಞಾಪಕ ಶಕ್ತಿಯಿಂದ ಈಗ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಗೆ ಈ ಪುಟ್ಟ ಮಗು ಆಯ್ಕೆಯಾಗಿದ್ದಾನೆ.
ಅಪ್ರಮೇಯ ಯಾವುದೇ ವಸ್ತುವನ್ನು ಒಮ್ಮೆ ನೋಡಿದರೆ ಬಲು ಬೇಗನೆ ನೆನಪಿನಲ್ಲಿ ಇಟ್ಟುಕೊಳ್ಳುತ್ತಾನೆ. ತಂದೆ-ತಾಯಿ ಯಾವುದೇ ವಿಷಯ ಹೇಳಿಕೊಟ್ಟರೂ ಮರೆಯುವುದಿಲ್ಲ.
ಕನ್ನಡ ವರ್ಣಮಾಲೆ ಮತ್ತು ಇಂಗ್ಲಿಷ್ ವರ್ಣಮಾಲೆ, ಭಾರತದ 28 ರಾಜ್ಯಗಳು, ಮುಖ್ಯಮಂತ್ರಿಗಳ ಹೆಸರುಗಳು, ಪಂಚಭೂತಗಳು, ಕಾಲಗಳು, ತಿಂಗಳುಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ರಾಶಿಚಕ್ರ ಚಿಹ್ನೆಗಳು, ಕೆಲವು ಜಿಕೆ ಪ್ರಶ್ನೋತ್ತರಗಳು, 1ರಿಂದ10 ಅಂಕೆಗಳನ್ನು 4 ಭಾಷೆಗಳಲ್ಲಿ, ದೇಹದ ಭಾಗಗಳು, ಬಣ್ಣಗಳು, ಹಣ್ಣುಗಳು, ತರಕಾರಿಗಳು, ಪ್ರಾಣಿಗಳು , ಸೌರವ್ಯೂಹದ ಗ್ರಹಗಳು, ಇತ್ಯಾದಿ ಬಹುಮುಖ ವಿಷಯಗಳಲ್ಲಿ ಅವನ ಅತ್ಯುತ್ತಮವಾದ ಜ್ಞಾಪಕ ಶಕ್ತಿಯನ್ನು ನೋಡಿ, ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಅವರನ್ನು ಹೆಮ್ಮೆಯಿಂದ ಪ್ರಶಂಸಿಸಿ ಗೌರವಿಸಿದೆ.
ಇವನು ಪುತ್ತೂರಿನ ಪಾಪ್ಯುಲರ್ ಬೇಕರಿ ಉದ್ಯೋಗಿಯಾಗಿರುವ ಪ್ರವೀಣ್ ನಾಯಕ್ ಮತ್ತು ಅಕ್ಷತಾ ದಂಪತಿಗಳ ಪುತ್ರ.