ಕಲುಷಿತ ನೀರು ಕುಡಿದು 70 ಮಂದಿ ಅಸ್ವಸ್ಥ!

WhatsApp
Telegram
Facebook
Twitter
LinkedIn

 

 

ಧಾರವಾಡ: ಕಲುಷಿತ ನೀರು ಕುಡಿದು 70ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಧಾರವಾಡದ ಕಲಘಟಗಿ ತಾ. ಮುಟಗಿಯಲ್ಲಿ ನಡೆದಿದೆ.

ಹಲವರಲ್ಲಿ ವಾಂತಿ ಹಾಗೂ ಅತಿಸಾರ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ 70 ಮಂದಿಯ ಪೈಕಿ 10 ಮಂದಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಹಾಗೂ 36 ಮಂದಿ ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳಿದವರು ಚೇತರಿಸಿಕೊಂಡಿದ್ದಾರೆ. ಈ ಮಧ್ಯೆ ನಿರ್ಲಕ್ಷ್ಯದ ಆರೋಪದ ಮೇಲೆ ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಗನ್ನಿಯನ್ನು ಅಮಾನತುಗೊಳಿಸಲಾಗಿದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon