“ಕಲ್ಕಿ 2898 ಎಡಿ’ ಸಿನಿಮಾ ಜೂ.27ರಂದು ರಿಲೀಸ್ ಆಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋ ಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಸೇರಿ ಅನೇಕರು ನಟಿಸಿದ್ದಾರೆ. ಸದ್ಯ ಅಭಿಮಾನಿಗಳಿಗೆ ಟಿಕೆಟ್ ದರದ ಬಿಸಿ ತಾಗಿದೆ.
ಕರ್ನಾಟಕದಲ್ಲಿ ಮುಂಜಾನೆಯೇ ಶೋಗಳನ್ನು ಆಯೋಜನೆ ಮಾಡಲಾಗಿದೆ. ಈ ಸಿನಿಮಾ 2ಡಿ ಜೊತೆಗೆ 3ಡಿಯಲ್ಲೂ ಲಭ್ಯವಿದೆ. ಈ ಚಿತ್ರಕ್ಕೆ ಕರ್ನಾಟಕದಲ್ಲಿ ಟಿಕೆಟ್‌ಗಳನ್ನು 500 ರೂಪಾಯಿ ಇಡಲಾಗಿದೆ.
ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಸಿನಿಮಾದ ಬಜೆಟ್ ಈಗಾಗಲೇ 600 ಕೋಟಿ ರೂಪಾಯಿ ಮೀರಿದೆ.