ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ 5,267 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿ, ಆದೇಶ ಹೊರಡಿಸಿದೆ.
1-5ನೇ ತರಗತಿಗೆ 4,424 ಶಿಕ್ಷಕರು, 6-8ನೇ ತರಗತಿಗೆ 78 ಹಾಗೂ 380 ದೈಹಿಕ ಶಿಕ್ಷಕರು ಸೇರಿ ಒಟ್ಟು 5,267 ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ. ನೇಮಕಾತಿ ಆದೇಶ ನೀಡುವ ಮೊದಲು ಹುದ್ದೆಗಳಿಗೆ ತಗಲುವ ಹಣಕಾಸು ವಿವರ ಅಂದಾಜಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದೆ.