ಕಲ್ಲು ಸಕ್ಕರೆ ಸೇವನೆಯ ಆರೋಗ್ಯ ಪ್ರಯೋಜನಗಳು

ಕಲ್ಲು ಸಕ್ಕರೆಯ ರುಚಿ ಸಕ್ಕರೆಯ. ಅದು ಸಾಮಾನ್ಯ ಸಕ್ಕರೆಯನ್ನು ಹರಳುಗಳನ್ನಾಗಿ ಮಾಡಿ ಇದನ್ನು ತಯಾರಿಸುತ್ತಾರೆ. ಹಾಗಾಗಿ ಸಾಮಾನ್ಯ ಸಕ್ಕರೆಗಿಂತ ಇದರಲ್ಲಿ ಸ್ವಲ್ಪ ಸಿಹಿ ಕಡಿಮೆ.

ಇದನ್ನು ಹೆಚ್ಚಾಗಿ ಔಷಧಿಯ ರೂಪದಲ್ಲಿ ಬಳಸಲಾಗುತ್ತದೆ. ವಿಟಮಿನ್ b12 ಕಲ್ಲು ಸಕ್ಕರೆಯಲ್ಲಿ ಕಂಡುಬರುತ್ತದೆ ಸಾಮಾನ್ಯವಾಗಿ ಸಕ್ಕರೆಯನ್ನು ತಯಾರಿಸಲು ಕಬ್ಬಿನ ರಸವನ್ನು ಉಪಯೋಗಿಸಲಾಗುತ್ತದೆ. ಕಬ್ಬಿನ ರಸವನ್ನು ಆವಿ ಮಾಡಿ ಹರಳುಗಟ್ಟಿಸಿ ಕಲ್ಲು ಸಕ್ಕರೆಯನ್ನು ತಯಾರಿಸಲಾಗುತ್ತದೆ. ಈ ಎಲ್ಲಾ ಕ್ರಿಯೆಗಳಿಂದ ತಯಾರಾಗುವ ಕಲ್ಲುಸಕ್ಕರೆ ದೇಹಕ್ಕೆ ಉತ್ತಮ ಜೀರ್ಣಕ್ರಿಯೆಯನ್ನು ನೀಡುತ್ತದೆ ಹಾಗೂ ದೇಹಕ್ಕೆ ತಂಪನ್ನು ನೀಡಬಲ್ಲದು.

ಹವಾಮಾನ ಬದಲಾವಣೆಯಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಶೀತ, ಕೆಮ್ಮು ಕಾಣಿಸಿಕೊಳ್ಳುತ್ತದೆ. ಶೀತ, ಕೆಮ್ಮು ನಿವಾರಣೆಗೆ ಕಲ್ಲು ಸಕ್ಕರೆ ಸೇವಿಸಿ. ಅರ್ಧ ಚಮಚದಷ್ಟು ಕಲ್ಲು ಸಕ್ಕರೆಯನ್ನು ತೆಗೆದುಕೊಳ್ಳಿ, ಇದಕ್ಕೆ ಅರ್ಧ ಚಮಚ ಆಗುವಷ್ಟು ಕಪ್ಪು ಮೆಣಸಿನ ಕಾಳನ್ನು ತೆಗೆದುಕೊಳ್ಳಿ. ಈ ಎರಡನ್ನೂ ಬೆರೆಸಿ ಪೇಸ್ಟ್ ನಂತೆ ತಯಾರಿಸಿಕೊಳ್ಳಿ ಹಾಗೂ ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸಿ.

Advertisement

ಇದು ಗಂಟಲು ಬೇನೆಗೆ ಬಹಳ ಉಪಯುಕ್ತವಾದ ಔಷಧ. ಮೂಗಿನ ರಕ್ತಸ್ರಾವವನ್ನು ತಕ್ಷಣವೇ ನಿಲ್ಲಿಸಲು ಕಲ್ಲು ಸಕ್ಕರೆ ಸಹಾಯ ಮಾಡುತ್ತದೆ. ನಿಮಗೆ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ, ಕಲ್ಲು ಸಕ್ಕರೆ ತುಂಡುಗಳನ್ನು ನೀರಿನೊಂದಿಗೆ ಸೇವಿಸಿ. ಸೇವಿಸಿದ ಆಹಾರ ಜೀರ್ಣವಾಗದಿದ್ದರೆ ಅಜೀರ್ಣ ಉಂಟಾಗಿ, ಮಲಬದ್ಧತೆ ಸಮಸ್ಯೆ ಎದುರಾಗಬಹುದು. ಉತ್ತಮ ಜೀರ್ಣಕ್ರಿಯೆಗೆ ಕಲ್ಲು ಸಕ್ಕರೆ ಸೇವಿಸಿ. ಕಲ್ಲು ಸಕ್ಕರೆ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.

ಋತುಚಕ್ರದ ವೇಳೆ ಕಿರಿ ಕಿರಿ ಅನುಭವಿಸುವ ಮಹಿಳೆಯರು ಕಲ್ಲು ಸಕ್ಕರೆ ಸೇವಿಸಿ. ದೇಹ ಆಯಾಸಗೊಂಡರೆ ಯಾವುದಕ್ಕೂ ಮನಸ್ಸು ಇರಲ್ಲ. ಹೀಗಾಗಿ ಕಲ್ಲು ಸಕ್ಕರೆ ಸೇವಿಸಿ. ಕಲ್ಲು ಸಕ್ಕರೆ ಸೇವಿಸಿದರೆ ಮನಸಿಗ್ಗೆ ನೆಮ್ಮದಿ ಅನಿಸುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement