ಬೆಂಗಳೂರು: ಬೆಂಗಳೂರಿನ ಸಂಚಾರ ನಾಡಿ ಬಿಎಂಟಿಸಿ. ಬೆಂಗಳೂರಿಗೆ ಬೇರೆ ಬೇರೆ ಕಡೆಯಿಂದ ಬಂದವರು, ಬೆಂಗಳೂರಿನಲ್ಲೇ ಇರುವವರ ದೈನಂದಿನ ಜೀವನದ ಅಂಗವಾಗಿದೆ ಅಂದ್ರೆ ತಪ್ಪಾಗಲ್ಲ.
ಆದ್ರೆ ಇದೇ ಬಸ್‌ಗಳು ನಿಜಕ್ಕೂ ಪ್ರಯಾಣಿಕರ ಸಂಚಾರಕ್ಕೆ ಎಷ್ಟು ಸೇಫ್ ಅನ್ನೋ ಪ್ರಶ್ನೆಗಳು ಹಲವು ಬಾರಿ ಉದ್ಬವವಾಗಿದ್ದು, ಈ ನಡುವೆ ಈ ಬಸ್‌ಗೆ ಸಂಬಂಧಿಸಿದ ಅಂಕಿ ಅಂಶ ಒಂದು ಪ್ರಯಾಣಿಕರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ.. ಬೆಂಗಳೂರಿನ ನಾಗದೇವನಹಳ್ಳಿ ಬಳಿ ಬ್ರೇಕ್ ಫೇಲ್ ಆಗಿದ್ದ ಬಿಎಂಟಿಸಿ ಒಂದು ಡಾಬಾ ಒಂದಕ್ಕೆ ಡಿಕ್ಕಿ ಹೊಡೆದಿತ್ತು.
ಘಟನೆ ವೇಳೆ ರಸ್ತೆಯಲ್ಲಿ ಓಡಾಡುವವರ ಸಂಖ್ಯೆ ಜೊತೆ ಬಸ್‌ನಲ್ಲಿ ಇದ್ದವರ ಸಂಖ್ಯೆ ಕೂಡ ಕಡಿಮೆ ಇದ್ದ ಕಾರಣ ಭಾರಿ ಅಪಾಯ ತಪ್ಪಿತ್ತು. ಆದರೆ ಈ ಘಟನೆ ಹೊಸದೇನಲ್ಲ. ಕಳೆದ 8 ತಿಂಗಳಲ್ಲಿ ಬಿಎಂಟಿಸಿಯ 220 ಬಸ್ ಗಳ ಬ್ರೇಕ್ ಡೌನ್ ಆಗಿದೆ. ಶಾಕ್ ಆದ್ರೂ ಇದು ಸತ್ಯ. ನಗರದ ಬೇರೆ ಬೇರೆ ಭಾಗಗಳಲ್ಲಿ ಸಂಚರಿಸುವ ಬಸ್ ಗಳು ಕಳೆದ ಏಪ್ರಿಲ್ ನಿಂದ ನವೆಂಬರ್ ವರೆಗೆ ಅಲ್ಲಲ್ಲಿ ಈ ಅಪಾಯಕ್ಕೆ ತುತ್ತಾಗಿವೆ.
ಆದರೆ ಅದೃಷ್ಟವಶಾತ್ ಕೆಲವು ಕಡೆ ಕೆಲ ಸಣ್ಣ ಪುಟ್ಟ ಅಪಾಯಗಳಷ್ಟೇ ಆಗಿದ್ದು, ಅನಾಹುತ ದೊಡ್ಡ ಮಟ್ಟದಲ್ಲಿ ಆಗಿಲ್ಲ ಅನ್ನೋದು ನಿಟ್ಟುಸಿರಿಮ ವಿಚಾರ. ಅಗದ್ರೆ ಕಳೆದ 8 ತಿಂಗಳಲ್ಲಿ ನಗರದಲ್ಲಿ ಬ್ರೇಕ್ ಡೌನ್ ಅಗಿರೋ ಬಿಎಂಟಿಸಿ ಅಂಕಿಅಂಶಗಳ ನೋಡೋದದ್ರೆ. ಏಪ್ರಿಲ್ ನಲ್ಲಿ 11, ಮೇ ಯಲ್ಲಿ 12, ಜೂನ್ ನಲ್ಲಿ 12, ಜುಲೈ ನಲ್ಲಿ 10, ಆಗಸ್ಟ್ ನಲ್ಲಿ 11, ಸೆಪ್ಟೆಂಬರ್ ನಲ್ಲಿ 39, ಅಕ್ಟೋಬರ್ ನಲ್ಲಿ 70, ನವೆಂಬರ್ ನಲ್ಲಿ 55. ಒಟ್ಟು ಡಿಸೇಲ್ ಬಸ್ – 74 ಎಲೆಕ್ಟ್ರಿಕ್ ಬಸ್ – 156 ಒಟ್ಟು ಬಸ್ ಗಳು – 220