ಬೆಂಗಳೂರು: ಕಳ್ಳರಿಗೆ ಪೊಲೀಸರು ಬೇರೆ ಅಲ್ಲ ಸಾಮಾನ್ಯ ಜನರು ಬೇರೆ ಅಲ್ಲ ಎಂಬ ಬೇದ ಭಾವ ಇಲ್ಲ.! ಹಾಗಂತ ಕಳ್ಳರು ಬೆಂಗಳೂರಿನಲ್ಲಿ ಪೊಲೀಸರ ಮನೆಗೆ ಕನ್ನ ಹಾಕಿ ಕೈಚಳಕ ತೋರಿಸಿದ್ದಾರೆ.
ಜಾಲಹಳ್ಳಿಯ ಹೆಚ್ ಎಟಿ ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಿದ್ದ ಪೊಲೀಸ್ ಕಾನ್ಸ್ ಟೇಬಲ್ ಶ್ರೀಧರ್ ಎಂಬುವವರ ಮನೆಗೆ ನುಗ್ಗಿದ ಕಳ್ಳರು, ಮನೆಯಲ್ಲಿದ್ದ ಚಿನ್ನಾಭರಣ, ಹಣ, ರೇಷ್ಮೆ ಸೀರೆಗಳನ್ನು ಕದ್ದು ಪರಾರಿಯಾಗಿದ್ದಾರೆ.
ಶ್ರೀಧರ್ ಹಾಗೂ ಪತ್ನಿ ಸಂಬಂಧಿಕರ ಮನೆಗೆಂದು ಮುರುಗೇಶ್ ಪಾಳ್ಯಕ್ಕೆ ತೆರಳಿದ್ದರು. ಈ ವೇಳೆ ಜಾಲಹಳ್ಳಿಯ ಪೊಲೀಸ್ ಕ್ವಾಟ್ರೆಸ್ ಗೆ ನುಗ್ಗಿದ ಕಳ್ಳರ ಗುಂಪು ಮನೆಯಲ್ಲಿದ್ದ ಚಿನ್ನದ ನೆಕ್ಲೇಸ್, ಓಲೆ, ರೇಷ್ಮೆ ಸೀರೆ, ಹಣವನ್ನು ದೋಚಿ ಎಸ್ಕೇಪ್ ಆಗಿದೆ. ಶ್ರೀಧರ್ ಹಾಗೂ ಪತ್ನಿ ಮನೆಗೆ ಬಂದಾಗಲೇ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳ್ಳರ ಬಂಧನಕ್ಕೆ ಬಲೆ ಬೀಸಲಾಗಿದೆ.






























