ಗುಲಾಬಿ ಫ್ರೆಶ್ ಇದ್ದಾಗಷ್ಟೇ ಉಪಯೋಗಕ್ಕೆ ಬರೋವುದೆಂಬುದು ಹೆಚ್ಚಿನವರ ಭಾವನೆ. ಆದರೆ ಒಣಗಿದ ಮೇಲೆ ಇದನ್ನ ಕಸ ಎಂದು ಎಸೆಯುವವರೇ ಹೆಚ್ಚು. ನೀವೂ ಹೀಗೆ ಮಾಡುತ್ತಿದ್ದರೆ ಇಂದೇ ನಿಲ್ಲಿಸಿ.
ಪ್ರೀತಿಯ ಸಂಕೇತ ಗುಲಾಬಿ. ಈ ಗುಲಾಬಿ ಫ್ರೆಶ್ ಇದ್ದಾಗಷ್ಟೇ ಉಪಯೋಗಕ್ಕೆ ಬರೋವುದೆಂಬುದು ಹೆಚ್ಚಿನವರ ಭಾವನೆ. ಆದರೆ ಒಣಗಿದ ಮೇಲೆ ಇದನ್ನ ಕಸ ಎಂದು ಎಸೆಯುವವರೇ ಹೆಚ್ಚು. ನೀವೂ ಹೀಗೆ ಮಾಡುತ್ತಿದ್ದರೆ ಇಂದೇ ನಿಲ್ಲಿಸಿ. ಏಕೆಂದರೆ ಬಾಡಿದ ಈ ಗುಲಾಬಿಯಿಂದ ನಿಮ್ಮ ತ್ವಚೆಯನ್ನ ಅರಳಿಸಬಹುದು. ಒಣಗಿದ ಗುಲಾಬಿ ದಳಗಳಲ್ಲಿ ತ್ವಚೆಗೆ ಅಗತ್ಯವಾದ ಅಂಶಗಳಿದ್ದು, ನೈಸರ್ಗಿಕ ಹೊಳಪು ಮತ್ತು ಕಾಂತಿಯನ್ನು ಕೊಡುತ್ತವೆ. ಹಾಗಾಗಿ ಅವುಗಳನ್ನು ಹೇಗೆ ಬಳಸಬೇಕು ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ.
ಈ ರೀತಿಯ ಸಮಯದಲ್ಲಿ, ಯಾವ ಪದಾರ್ಥಗಳನ್ನು ಬಳಸಬೇಕು ಮತ್ತು ಹೇಗೆ ಮಾಡಬೇಕೆಂಬುದರ ಕುರಿತು ನಿಮಗೆ ಕಲ್ಪನೆಗಳು ಬೇಕು ಎಂದು ನಮಗೆ ಖಚಿತವಾಗಿದೆ! ಇಲ್ಲಿ ನಿಮಗೆ ಸಹಾಯ ಮಾಡಲು, ನಿಮ್ಮ ಚರ್ಮದ ಮೇಲೆ ತರಲು ಒಣಗಿದ ಗುಲಾಬಿ ದಳಗಳಂತಹ ಸರಳವಾದದನ್ನು ನೀವು ಬಳಸಬಹುದಾದ ಮಾರ್ಗಗಳನ್ನು ನಾವು ಕಂಡುಕೊಂಡಿದ್ದೇವೆ!
ತ್ವಚೆಗೆ ಒಣಗಿದ ಗುಲಾಬಿಯ ಪ್ರಯೋಜನಗಳು:
ಒಣಗಿದ ಗುಲಾಬಿಗಳು ಗುಣಪಡಿಸುವ ಗುಣಗಳನ್ನು ಹೊಂದಿದ್ದು, ಹಾನಿಗೊಳಗಾದ ಚರ್ಮ ಮತ್ತು ಡೆಡ್ ಸೆಲ್ ಗಳನ್ನು ತೆಗೆಯಲು ಉಪಯುಕ್ತವಾಗಿದೆ.
ಒಣಗಿದ ಗುಲಾಬಿಯನ್ನು ಚರ್ಮದ ಮೇಲೆ ಹಚ್ಚುವುದರಿಂದ, ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.
ಬಿಸಿಲಿನ ಬೇಗೆಯಿಂದ ಉಂಟಾಗುವ ಕೆಂಪು ಗುಳ್ಳೆಯನ್ನು ತೆಗೆಯಲು, ಒಣಗಿದ ಗುಲಾಬಿಯ ಪೇಸ್ಟ್ ಬಳಸಬಹುದು.
ಶಾಖದಿಂದ ಉಂಟಾಗಿರುವ ಕೆಂಪು ಗುಳ್ಳೆಯನ್ನು ಕಡಿಮೆಮಾಡಿ, ನೈಸರ್ಗಿಕ ಹೊಳಪು ಮತ್ತು ಆರೋಗ್ಯಕರ ಚರ್ಮವನ್ನು ನೀಡುವುದು.
ಬಹಳಷ್ಟು ಕ್ಲೆನ್ಸರ್ ಗಳಲ್ಲಿ ಒಣಗಿದ ಗುಲಾಬಿಗಳನ್ನು ಬಳಸಲಾಗುತ್ತದೆ. ಏಕೆಂದರೆ ಗುಲಾಬಿಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಸಂಯುಕ್ತಗಳಿವೆ. ಈ ಸಂಯುಕ್ತಗಳು ತ್ವಚೆಯನ್ನು ಪುನರ್ಯೌವನಗೊಳಿಸುತ್ತದೆ.
ತ್ವಚೆಯ ಆರೈಕೆಗಾಗಿ ಒಣಗಿದ ಗುಲಾಬಿಗಳನ್ನು ಹೇಗೆ ಬಳಸುವುದು?
ರೋಸ್ ಫೇಸ್ ಮಾಸ್ಕ್:
ಮನೆಯಲ್ಲಿಯೇ ಗುಲಾಬಿ ದಳಗಳನ್ನು ಬಳಸಿ ಅತ್ಯುತ್ತಮವಾದ ತೇವಾಂಶವುಳ್ಳ ಮಾಸ್ಕ್ ತಯಾರಿಸಲು ನಿಮಗೆ 2 ಚಮಚ ಪುಡಿಮಾಡಿದ ಒಣಗಿದ ಗುಲಾಬಿ ದಳಗಳು, 5 ಚಮಚ ಹಾಲು ಮತ್ತು 1 ಚಮಚ ಜೇನುತುಪ್ಪ ಬೇಕಾಗುತ್ತದೆ. ದಪ್ಪ ಪೇಸ್ಟ್ ತಯಾರಿಸಲು ಈ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ತದನಂತರ ಈ ಪೇಸ್ಟ್ ತೆಗೆದುಕೊಂಡು ನಿಮ್ಮ ಕೈಗಳಿಗೆ ಸ್ವಲ್ಪ ಹಚ್ಚಿ. ಅದು ಸುಡುವ ಅನುಭವ ನೀಡದಿದ್ದರೆ, ನಿಮ್ಮ ಮುಖಕ್ಕೆ ಹಚ್ಚಿ ಮತ್ತು 15-20 ನಿಮಿಷಗಳ ಕಾಲ ಬಿಡಿ. ಅದನ್ನು ಒಣಗಲು ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ.
ರೋಸ್ ವಾಟರ್:
ರೋಸ್ ವಾಟರ್ ಚರ್ಮಕ್ಕೆ ಅಗತ್ಯ ಉತ್ಪನ್ನವಾಗಿದೆ. ನೀವು ಅದನ್ನು ಮನೆಯಲ್ಲಿಯೇ ತಯಾರಿಸಬಹುದಾದರೆ, ಎಷ್ಟು ಒಳ್ಳೆಯದಲ್ಲವೇ? ಅದಕ್ಕಾಗಿ ನೀವು ಮಾಡಬೇಕಾಗಿರುವುದು ಪ್ಯಾನ್ ಅನ್ನು ತೆಗೆದುಕೊಂಡು, ಅದರಲ್ಲಿ ಒಣಗಿದ ಗುಲಾಬಿ ದಳಗಳನ್ನು ಹಾಕಿ, ಅದಕ್ಕೆ ನೀರನ್ನು ಮಾತ್ರ ಸೇರಿಸಿ. ಲೋ ಫ್ಲೇಮ್ ನಲ್ಲಿ ನೀರನ್ನು ಕುದಿಸಿ. ಪ್ಯಾನ್ ಅನ್ನು ಮುಚ್ಚಿ. ನೀರು ತಣಿಯಲು ಬಿಡಿ. ಈಗ ನಿಮಗೆ ನೈಸರ್ಗಿಕ ರೋಸ್ ವಾಟರ್ ಸಿದ್ಧ.
ರೋಸ್ ಆಯಿಲ್:
ನಿಮ್ಮ ಕೈ -ಕಾಲುಗಳಿಗೆ ಹಚ್ಚಲು ನೈಸರ್ಗಿಕ ರೋಸ್ ಆಯಿಲ್ ಹುಡುಕುತ್ತಿದ್ದರೆ, ಅದನ್ನು ನೀವೇ ಮನೆಯಲ್ಲಿ ತಯಾರಿಸಬಹುದು. ಅದಕ್ಕಾಗಿ ನೀವು ಒಂದು ಜಾರ್ ಗೆ ಅರ್ಧ ಕಪ್ ಆಲಿವ್ ಎಣ್ಣೆ ಹಾಕಿ, ಅದಕ್ಕೆ ⅓ ಕಪ್ ಒಣಗಿದ ಗುಲಾಬಿ ದಳಗಳನ್ನು ಸೇರಿಸಿ, ಇದನ್ನು ಮೂರು ವಾರಗಳವರೆಗೆ ಬಿಡಿ. ಅದರ ನಂತರ, ಜಾರ್ ನಿಂದ ಎಣ್ಣೆಯನ್ನು ಸೋಸಿಕೊಳ್ಳಿ. ಇದನ್ನು ನಿಮ್ಮ ಕೈ ಮತ್ತು ಕಾಲುಗಳ ಮೇಲೆ ಬಳಸಿ.
ರೋಸ್ ಬಾತ್ ಬ್ಯಾಗ್:
ಒಣಗಿದ ಗುಲಾಬಿಯ ಬಾತ್ ಬ್ಯಾಗ್ ಗಳನ್ನು ತಯಾರಿಸಲು, ಒಂದು ಬಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ಒಂದು ಚಮಚ ಒಣಗಿದ ಗುಲಾಬಿ ದಳಗಳನ್ನು ಇಡಿ. ಈ ಚೀಲಗಳನ್ನು ಹೊಲಿಯಬಹುದು ಅಥವಾ ಅದನ್ನು ಕಟ್ಟಬಹುದು. ರಿಫ್ರೆಶ್ ಮತ್ತು ಹಿತವಾದ ಪರಿಣಾಮಕ್ಕಾಗಿ ಸ್ನಾನ ಮಾಡಲು ಹೋಗುತ್ತಿರುವಾಗ ಈ ಬ್ಯಾಗ್‌ಗಳನ್ನು ನಿಮ್ಮ ಸ್ನಾನದತೊಟ್ಟಿಯಲ್ಲಿ ಹಾಕಿ. ನಿಮ್ಮ ಸ್ನಾನವು ಸ್ಪಾದಂತೆ ಭಾಸವಾಗುವುದರಲ್ಲಿ ಸಂದೇಹವಿಲ್ಲ.