ಬೆಂಗಳೂರು : 2024 ರ ಲೋಕಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್‌ನ್ನು ನಿದ್ದೆಗೆಡಿಸಿದೆ. ಪಂಚ ಗ್ಯಾರಂಟಿಯಿಂದ ಗೆಲುವು ಗ್ಯಾರಂಟಿ ಎಂದುಕೊಂಡಿದ್ದ ಕಾಂಗ್ರೆಸ್‌ಗೆ ಜನ ಶಾಕ್ ಕೊಟ್ಟಿದ್ದಾರೆ.
ಸದ್ಯ ರಾಜ್ಯ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ಅಪಸ್ವರ ಕೇಳಿ ಬರುತ್ತಿವೆ. ಪಂಚ ಗ್ಯಾರೆಂಟಿ ನೀಡಿದರೂ ಕಾಂಗ್ರೆಸ್‌ಗೆ ಜನ 9ಕ್ಕಿಂತ ಹೆಚ್ಚು ಸೀಟ್ಗಳಲ್ಲಿ ಗೆಲ್ಲಿಸಲಿಲ್ಲ ಎಂದು ಒಬ್ಬೊಬ್ಬ ಸಚಿವರು ಪರ-ವಿರೋಧ ಹೇಳಿಕೆ ನೀಡುತ್ತಿದ್ದಾರೆ. ಸಚಿವರಾದ ಕೆ.ಎಚ್.ಮುನಿಯಪ್ಪ, ಚಲುವರಾಯಸ್ವಾಮಿ, ಗೂಳಿಹಟ್ಟಿ ಶೇಖರ್, ರಾಜ್ಯಸಭೆ ಸದಸ್ಯ ಜಿ.ಸಿ ಚಂದ್ರಶೇಖರ್, ಶಾಸಕರಾದ ನರೇಂದ್ರ ಸ್ವಾಮಿ, ಉದಯ್ ಮತ್ತಿತರರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚಲುವರಾಯಸ್ವಾಮಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಪರ ಜನ ಬೆಂಬಲ ಸೂಚಿಸಿಲ್ಲ. ಜನ ಯಾವ್ಯಾವ ಕಾರಣಕ್ಕೆ ಮತ ಹಾಕಿದರು ಅಂತಾ ಗೊತ್ತಾಗಲಿಲ್ಲ.
ಒಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಿನ್ನಡೆಯಾಗಿದೆ ಎಂದು ಹೇಳುವು ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇನ್ನು ಚಲುವರಾಯಸ್ವಾಮಿ ಅವರು ಪ್ರತಿನಿಧಿಸುವ ನಾಗಮಂಗಲ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರು ಹೆಚ್ಚು ಲೀಡ್ ಪಡೆದಿದ್ದು, ಹೀಗಾಗಿ ಅವರು ಗ್ಯಾರಂಟಿ ಕೈ ಹಿಡಿಯಲಿಲ್ಲ ಎಂದು ಹೇಳಿಕೆ ನೀಡಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಸೋತಿದ್ದು, ಈ ಬಗ್ಗೆ ಮಾತನಾಡಿರುವ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ, ಗ್ಯಾರಂಟಿ ಕೈಹಿಡಿದಿಲ್ಲ ಎಂದು ಮನವರಿಕೆಯಾಗಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಅವಶ್ಯಕತೆ ಇಲ್ಲ ಅಂತಾ ಅವರೇ ತೀರ್ಮಾನಿಸಿದ್ದಾರೆ. ಇಂದಿರಾ ಗಾಂಧಿ, ವಾಜಪೇಯಿ ಅಂತಹ ಘಟಾನುಘಟಿ ನಾಯಕರೇ ಸೋತಿಲ್ವಾ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಯಾವಾಗ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಆಗಲಿಲ್ಲವೋ, ಹೀಗಾಗಿ ಸೋಲಿನ ವಿಚಾರವನ್ನು ಗ್ಯಾರಂಟಿ ಮೇಲೆ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಸಚಿವ ಕೆ.ಚ್.ಮುನಿಯಪ್ಪ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿದ್ದಕ್ಕೆ ಹಾಗೂ ಗ್ಯಾರಂಟಿ ಯೋಜನೆಗಳು ವರ್ಕೌಟ್ ಆದ ಕಾರಣಕ್ಕೆ ಕ್ಯಾಂಗ್ರೆಸ್ಗೆ ಈ ಸಲ ಹೆಚ್ಚು ಸೀಟ್ (9 ಕ್ಷೇತ್ರ) ಬಂದಿವೆ ಎಂದಿದ್ದಾರೆ.