ಮುಂಬೈ : ಗ್ಯಾರಂಟಿ ಕಾರ್ಡ್ನೊಂದಿಗೆ ವಿಧಾನಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್ ಸಜ್ಜಾಗಿದೆ. ಈ ತಂತ್ರವು ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ವೈಫಲ್ಯ ಕಂಡಿದೆ.ನಮ್ಮಲ್ಲಿ ಕೂಡ ಯಶಸ್ವಿಯಾಗುವುದಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಫಡಣವೀಸ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಪಕ್ಷದ ಚುನಾವಣಾ ಭರವಸೆಗಳನ್ನೊಳಗೊಂಡ ಗ್ಯಾರಂಟಿ ಕಾರ್ಡ್ ಅನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
ರಾಹುಲ್ ಗಾಂಧಿ ಅವರ ಗ್ಯಾರಂಟಿ ಕಾರ್ಡ್ ರಾಜಸ್ಥಾನ ಮತ್ತು ಛತ್ತೀ ಸಗಢದಲ್ಲಿ ಕಾಂಗ್ರೆಸ್ಗೆ ನೆರವಾಗಿರಲಿಲ್ಲ. ತಾವು ಭರವಸೆ ನೀಡಿದ್ದ ಹಾಗೆ, ಗ್ಯಾರಂಟಿ ಕಾರ್ಡ್ಗಳು ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಜಾರಿಯಾಗಲಿಲ್ಲವೇಕೆ ಎಂಬುದನ್ನೂ ರಾಹುಲ್ ಗಾಂಧಿ ವಿವರಿಸಬೇಕು. ಈ ತಂತ್ರವು ಇಲ್ಲೂ ವಿಫಲವಾಗಲಿದೆ’ ಎಂದು ಹೇಳಿದ್ದಾರೆ.