ಜೈಪುರ: ಕಾಂಗ್ರೆಸ್ ಬಡವರನ್ನು ಹಸಿವಿನಿಂದ ಸಾಯಿಸುತ್ತದೆ. ಆದರೆ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದರು.
ಬಿಜೆಪಿ ಅಭ್ಯರ್ಥಿ ಸುಮೇಧಾನಂದ ಸರಸ್ವತಿ ಪರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಜಸ್ಥಾನದ ಸಿಕರ್ ಕ್ಷೇತ್ರದಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ದೇಶದ ದೊಡ್ಡ ಸಮಸ್ಯೆ. ಕರ್ಫ್ಯೂಗಳನ್ನು ಜಾರಿಗೊಳಿಸುವುದು ಕಾಂಗ್ರೆಸ್‌ನವರ ಡಿಎನ್‌ಎಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು.
ಭಗವಾನ್ ರಾಮ ಮತ್ತು ಕೃಷ್ಣರಂತಹ ಪೂಜ್ಯ ವ್ಯಕ್ತಿಗಳ ಅಸ್ತಿತ್ವವನ್ನು ಪ್ರಶ್ನಿಸಿದ ಕಾಂಗ್ರೆಸ್ ಪಕ್ಷವು ಅಯೋಧ್ಯೆ ರಾಮಮಂದಿರದಂತಹ ಸ್ಮಾರಕ ಯೋಜನೆಗಳನ್ನು ಕೈಗೊಳ್ಳಲು ಸಮರ್ಥವಾಗಿಲ್ಲ ಎಂದು ನಂಬುತ್ತಾರೆ. ತನ್ನ ಆಡಳಿತದಲ್ಲಿ ಕಾಂಗ್ರೆಸ್ ಜನರ ಹಕ್ಕುಗಳನ್ನು ಕಸಿದುಕೊಂಡಿತು. ಈಗ ರಾಷ್ಟ್ರದಾದ್ಯಂತ “ಫಿರ್ ಏಕ್ ಬಾರ್, ಮೋದಿ ಸರ್ಕಾರ್ (ಮತ್ತೊಮ್ಮೆ ಮೋದಿ ಸರ್ಕಾರ)” ಎಂಬ ಒಂದೇ ಒಂದು ಘೋಷಣೆ ಇದೆ ಎಂದು ರಾಜಸ್ಥಾನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೌಸಾ ಜನರಿಂದ ತನಗೆ ದೊರೆತ ಬೆಂಬಲವನ್ನು ನೆನಪಿಸಿಕೊಂಡರು ಯೋಗಿ ಅದಿತ್ಯನಾಥ್.
ಭಾರತದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು ಹೇಳಿದ ಅವರು, ಭಾರತವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಪ್ರಧಾನಿ ಮೋದಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು