ನವದೆಹಲಿ: ಹಲವು ಪೈಪೋಟಿ, ಕಸರತ್ತುಗಳ ಬಳಿಕ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ಚುನಾವಣಾ ಸಮಿತಿಯು ಲೋಕಸಭಾ ಕ್ಷೇತ್ರಗಳಿಗೆ ಬಾಕಿಯಿದ್ದ 21 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಂತಿಮಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಈ ಪಟ್ಟಿಯನ್ನು ಇಂದು ಪ್ರಕಟಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸಿಇಸಿ ಅಂತಿಮಗೊಳಿಸಿರುವ ಸಂಭವನೀಯ ಅಭ್ಯರ್ಥಿಗಳು ವಿವರ
ದಕ್ಷಿಣ ಕನ್ನಡ – ಪದ್ಮರಾಜ್ ರಾಮಯ್ಯ
ಉಡುಪಿ- ಚಿಕ್ಕಮಗಳೂರು: ಜಯಪ್ರಕಾಶ್ ಹೆಗ್ಡೆ
ಬೆಂಗಳೂರು ದಕ್ಷಿಣ: ಸೌಮ್ಯಾ ರೆಡ್ಡಿ
ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ
ಬೆಂಗಳೂರು ಕೇಂದ್ರ: ನಜೀರ್ ಅಹ್ಮದ್ ಮನ್ಸೂರ್ ಅಲಿಖಾನ್
ಕೋಲಾರ: ಡಾ| ಎಲ್. ಹನುಮಂತಯ್ಯ
ಕಲಬುರಗಿ: ರಾಧಾಕೃಷ್ಣ ದೊಡ್ಡಮನಿ
ಬೀದರ್: ರಾಜಶೇಖರ ಪಾಟೀಲ್ ಹುಮ್ನಾಬಾದ್
ರಾಯಚೂರು: ಕುಮಾರ ನಾಯಕ್
ಕೊಪ್ಪಳ: ರಾಜಶೇಖರ ಹಿಟ್ನಾಳ್
ಚಿತ್ರದುರ್ಗ: ಬಿ.ಎನ್. ಚಂದ್ರಪ್ಪ
ದಾವಣಗೆರೆ: ಡಾ| ಪ್ರಭಾ ಮಲ್ಲಿಕಾರ್ಜುನ
ಚಾಮರಾಜನಗರ: ಸುನಿಲ್ ಬೋಸ್
ಬಾಗಲಕೋಟೆ: ಸಂಯುಕ್ತ ಶಿವಾನಂದ ಪಾಟೀಲ್/ಅಜಯಕುಮಾರ ಸರನಾಯಕ್
ಬೆಳಗಾವಿ: ಮೃಣಾಲ್ ಹೆಬ್ಬಾಳ್ಕರ್
ಚಿಕ್ಕೋಡಿ: ಪ್ರಿಯಾಂಕಾ ಜಾರಕಿಹೊಳಿ
ಮೈಸೂರು: ಎಂ. ಲಕ್ಷ್ಮಣ
ಇನ್ನುಳಿದ ಬೆಂಗಳೂರು ಉತ್ತರ, ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಾಗಿಲ್ಲ ಎಂದು ತಿಳಿದುಬಂದಿದೆ.