ಕಾಂಬೋಡಿಯಾ : ನೈಋತ್ಯ ಕಾಂಬೋಡಿಯಾದ ಸೇನಾ ನೆಲೆಯಲ್ಲಿ ನಡೆದ ಬೃಹತ್ ಸ್ಫೋಟದಲ್ಲಿ 20 ಸೈನಿಕರು ಸಾವನ್ನಪ್ಪಿದ್ದಾರೆ. ಕೊಂಪಾಂಗ್ ಸ್ಪ್ಯೂ ಪ್ರಾಂತ್ಯದಚ್ಬರ್ ಮೊನ್ ಜಿಲ್ಲೆಯಲ್ಲಿ ಸ್ಫೋಟ ಸಂಭವಿಸಿದ್ದು, ಸಾವು -ನೋವಿನ ಜೊತೆಗೆ ಹಲವಾರು ಮಿಲಿಟರಿ ವಾಹನಗಳು ಹಾನಿಗೊಳಗಾಗಿವೆ ಹತ್ತಿರದ ಮನೆಗಳಿಗೆ ಹಾನಿಯಾಗಿದೆ. ಗಾಯಾಳು ಸೈನಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ ಎಂದು ಸೇನಾ ಅಧಿಕಾರಿ ಕರ್ನಲ್ ಯೂಂಗ್ ಸೊಖೋನ್ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 25 ಗ್ರಾಮಸ್ಥರ ಮನೆಗಳಿಗೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಇನ್ನು, ಸ್ಥಳೀಯ ಜನರು ಭಯಬೀತರಾಗಿದ್ದಾರೆ. ನಾಲ್ಕು ಕಟ್ಟಡದಲ್ಲಿ ಸೇನಾ ಸಾಮಗ್ರಿ ಶೇಖರಿಸಲಾಗಿತ್ತು ಅದರಲ್ಲಿ ಒಂದು ಸ್ಪೋಟಗೊಂಡಿದೆ.
