ಬೆಂಗಳೂರು: ರಾಜ್ಯದೆಲ್ಲೆಡೆ ಕಾನೂನು ಸುವ್ಯವಸ್ಥೆ ಉತ್ತಮಪಡಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ನೈತಿಕ ಪೊಲೀಸ್ ಗಿರಿ ಬಗ್ಗೆ ವಿಶೇಷವಾಗಿ ಮಾತನಾಡಿದ ಅವರು ಮಂಗಳೂರು, ಉಡುಪಿ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಕಣಗಳು ಜಾಸ್ತಿ ವರದಿಯಾಗುತ್ತಿದ್ದು, ಮೋರಲ್ ಪೊಲೀಸಿಂಗ್ ನಲ್ಲಿ ಭಾಗಿಯಾಗುವವರನ್ನು ಹದ್ದು ಬಸ್ತಿನಲ್ಲಿಡಲು ಮಂಗಳೂರಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಲಾಗಿದೆ, ಈ ಪಡೆಯು, ತಾವೇ ಕಾನೂನಿನ ಪರಿಪಾಲಕರು ಅಂತ ಪೋಸು ಬಿಗಿದು ಜನರಿಗೆ ತೊಂದರೆ ಕೊಡುವವರನ್ನು-ಅವರು ಯಾವುದೇ ಸಮುದಾಯದವರಾಗಿರಲಿ-ಹಿಡಿದು ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಇನ್ನು ಮಂಗಳೂರಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಗೃಹ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ ಎಂದು ತಿಳಿಸಿದ್ದಾರೆ.