ಕಾಪು: ಉಡುಪಿ ಜಿಲ್ಲೆಯ ಕಾಪುವಿನಲ್ಲಿರುವ ಹೊಸ ಮಾರಿಗುಡಿಗೆ ಇಂದು ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ ನೀಡಿದ್ದಾರೆ. ಪತ್ನಿ ದೇವಿಶಾ ಶೆಟ್ಟಿ ಜೊತೆ ಆಗಮಿಸಿದ ಸೂರ್ಯಕುಮಾರ್ ಯಾದವ್‌ಗೆ ಮಾರಿಗುಡಿ ವತಿಯಿಂದ ಭವ್ಯ ಸ್ವಾಗತ ಕೋರಲಾಯಿತು. ಇತ್ತೀಚೆಗಷ್ಟೆ T20 ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ದೇಶದ ಜನರ ವಿಶ್ವಕಪ್ ಕನಸನ್ನು ನನಸಾಗಿದ್ದರು. ಇನ್ನು ದಂಪತಿ ಮಾರಿಯಮ್ಮನ ದರ್ಶನ ಪಡೆದು, ಭವ್ಯವಾಗಿ ರೂಪುಗೊಳ್ಳುತ್ತಿರುವ ಹೊಸ ಮಾರಿಗುಡಿಯನ್ನು ವೀಕ್ಷಣೆ ಮಾಡಿದ್ದಾರೆ. ಇನ್ನು, ಸೂರ್ಯಕುಮಾರ್, ಕರಾವಳಿಯ ಅಳಿಯ ಎಂಬುದು ಗಮನಾರ್ಹ ಸಂಗತಿ. ಈ ಸಂದರ್ಭ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಭೇಟಿ ಸಂದರ್ಭ ಹೊಸ ಮಾರಿಗುಡಿಯ ಊರಿನ ಪ್ರಮುಖರು ಉಪಸ್ಥಿತರಿದ್ದರು.
