ಕಾರವಾರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗದಲ್ಲಿ ಬಂಡೆಕಲ್ಲು ಹಾಗೂ ಮಣ್ಣು ಕುಸಿದಿದ್ದು ಸುರಂಗ ಮಾರ್ಗದ ಸಂಚಾರ ಬಂದ್ ಮಾಡುವ ಸಾಧ್ಯತೆ ಇದೆ. ಅಂಕೋಲಾದಿಂದ ಕಾರವಾರ ನಗರಕ್ಕೆ ಸಂಪರ್ಕ ನೀಡುವ ಸುರಂಗದ ಒಂದು ತುದಿಯಲ್ಲಿ ಬೆಳಗಿನಜಾವ ಮಣ್ಣು ಹಾಗೂ ಬಂಡೆಗಳು ಕುಸಿದು ಬಿದ್ದಿವೆ. ಹೀಗಾಗಿ ಸದ್ಯ ಸಂಚಾರಕ್ಕೆ ಅವಕಾಶ ನೀಡದೇ ಕಲ್ಲುಗಳ ತೆರವು ಮಾಡಲು ಐಆರ್ಬಿ ಸಿದ್ಧತೆ ನಡೆಸಿದೆ. ಸದ್ಯ ಒಂದೇ ಸುರಂಗ ಮಾರ್ಗದಲ್ಲಿ ಟುವೇ ಸಂಚಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆ ಇದೆ.