ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸಟ್ಲೆಜ್ ನದಿಗೆ ಬಿದ್ದ ಪರಿಣಾಮ ಚೆನ್ನೈನ ಮಾಜಿ ಮೇಯರ್ ಸೈದೈ ದುರೈಸಾಮಿ ಅವರ ಪುತ್ರ ನಾಪತ್ತೆಯಾಗಿರುವ ಘಟನೆ ನಡೆದಿದೆ.
ವೆಟ್ರಿ ದುರೈಸಾಮಿ (45) ಅವರು ತಮ್ಮ ಸಹ ಪ್ರಯಾಣಿಕ ಗೋಪಿನಾಥ್ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಘಟನೆಯ ವೇಳೆ ಹಿಮಾಚಲ ಪ್ರದೇಶದ ಟಬೋ ನಿವಾಸಿ ತೆಂಜಿನ್ ಎಂಬಾತ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ.
ಇನ್ನು ದುರೈಸ್ವಾಮಿ ಮತ್ತು ಗೋಪಿನಾಥ್ ಕಣಿವೆ ಪ್ರದೇಶದಲ್ಲಿ ಸಂಚರಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ನದಿಗೆ ಧುಮುಕಿದೆ. ಪರಿಣಾಮ ಕಾರು ಚಾಲನೆ ಮಾಡುತ್ತಿದ್ದ ತೆಂಜಿನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಗೋಪಿನಾಥ್ ಅವರನ್ನು ರಕ್ಷಣಾ ತಂಡ ರಕ್ಷಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ದುರೈಸಾಮಿ ನಾಪತ್ತೆಯಾಗಿದ್ದು ಹುಡುಕುವ ಪ್ರಯತ್ನಗಳು ರಕ್ಷಣಾ ತಂಡ ನಡೆಸುತ್ತಿವೆ.