2024-25 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒಂದಾದ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ, ಸರಕು ಸಾಗಣೆ/ಟ್ಯಾಕ್ಸಿ/ಹಳದಿ ಫಲಕದ ವಾಹನಗಳನ್ನು ಖರೀದಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 10, 2024. ಸ್ವಾವಲಂಬಿ ಸಾರಥಿ ಯೋಜನೆ ಮೂಲಕ ಅರ್ಜಿ ಸಲ್ಲಿಸುವ ಮತ್ತು ಆಯ್ಕೆಯಾದ ಅರ್ಹ ಫಲಾನುಭವಿಗಳು ಸರಕು ಸಾಗಣೆ/ಟ್ಯಾಕ್ಸಿ/ಹಳದಿ ಫಲಕದ ವಾಹನಗಳ ಖರೀದಿಯಲ್ಲಿ ಶೇ.75 ಅಥವಾ ಗರಿಷ್ಠ ರೂ.4.00 ಲಕ್ಷದವರೆಗೆ ಸಹಾಯಧನವನ್ನು ಪಡೆಯುತ್ತಾರೆ ಮತ್ತು ಈ ಯೋಜನೆಯನ್ನು ಬ್ಯಾಂಕ್ ಸಹಯೋಗದಲ್ಲಿ ಜಾರಿಗೊಳಿಸಲಾಗುವುದು.
ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಯಾವ ವಾಹನಗಳನ್ನು ಖರೀದಿಸಬಹುದು?ಅರ್ಹ ಫಲಾನುಭವಿಗಳು ಸುವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಸರಕು ಸಾಗಣೆ ವಾಹನಗಳು/ಟ್ಯಾಕ್ಸಿ/ಹಳದಿ ಕ್ಯಾಬ್‌ಗಳನ್ನು ಖರೀದಿಸಬಹುದು.ಟ್ಯಾಕ್ಸಿ / ಕಾರ್ಗೂಡ್ಸ್ /ಟಾಟಾ ASನಾಲ್ಕು ಚಕ್ರಗಳು / ಅಶೋಕ್ ಲೇಲ್ಯಾಂಡ್ ದೋಸ್ತ್ಆಟೋ / ಬಜಾಜ್ ಆಟೋ ಯಾರು ಅರ್ಜಿ ಸಲ್ಲಿಸಬಹುದು?1) ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿರಬೇಕು.2) ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.3) ಅರ್ಜಿದಾರರು 21 ರಿಂದ 60 ವರ್ಷ ವಯಸ್ಸಿನವರಾಗಿರಬೇಕು.4) ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ರೂ.1,50,000 ಮತ್ತು ನಗರ ಪ್ರದೇಶಗಳಲ್ಲಿ ರೂ.2,00,000 ವ್ಯಾಪ್ತಿಯಲ್ಲಿರಬೇಕು.6) ಲಘು ವಾಣಿಜ್ಯ ವಾಹನ ಚಲಾಯಿಸಲು ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯ.7) ಕುಟುಂಬದ ಸದಸ್ಯರುಸರ್ಕಾರೀ ಕೆಲಸದಲ್ಲಿ ಇರಬಾರದು
ಅರ್ಜಿ ಸಲ್ಲಿಸುವುದು ಹೇಗೆ:ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೇವಾಸಿಂಧು ವೆಬ್‌ಸೈಟ್‌ನಲ್ಲಿ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿದ ನಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ. ಅರ್ಜಿಯನ್ನು ಸಲ್ಲಿಸಲು ಅಗತ್ಯವಿರುವ ದಾಖಲೆಗಳು:ಅರ್ಜಿದಾರರ ಆಧಾರ್ ಕಾರ್ಡ್ಬ್ಯಾಂಕ್ ಖಾತೆಗಳ ಪುಸ್ತಕಜಾತಿ ಮತ್ತು ಆದಾಯ ಪ್ರಮಾಣಪತ್ರಫೋಟೋಚಾಲಕರ ಪರವಾನಗಿಮೊಬೈಲ್ ಫೋನ್ ಸಂಖ್ಯೆಪಡಿತರ ಚೀಟಿಯ ಪ್ರತಿ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.