ಕಾವೇರಿ ನೀರಿನ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು.?

 

ಚಿತ್ರದುರ್ಗ :  ಕಾವೇರಿ ನೀರಿನ ಸಂಬAದಪಟ್ಟAತೆ ತಮಿಳುನಾಡಿಗೆ ನೀರನ್ನು ಬಿಡುಗಡೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.

ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಅವರನ್ನು ಕಾಂಗ್ರೆಸ್ ಕಚೇರಿಯಲ್ಲಿ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಬಂಗಾರಪ್ಪರವರು ಮುಖ್ಯಮಂತ್ರಿಗಳಾಗಿದ್ದಾಗ ಇದ್ದ ಪರಿಸ್ಥಿತಿ ಬೇರೆ ಈಗಿನ ಪರಿಸ್ಥಿತಿ ಬೇರೆಯಾಗಿದೆ. ಆಗ ಯಾವುದೇ ರೀತಿಯ ನ್ಯಾಯ ಮಂಡಳಿಗಳು ಇರಲಿಲ್ಲ ನ್ಯಾಯಾಲಯಕ್ಕೆ ಹೋಗುವವರು ಇರಲಿಲ್ಲ ಆದರೆ ಈಗ ಮಂಡಳಿ ಇದೆ ಸ್ವಲ್ಪ ವ್ಯತ್ಯಾಸವಾದರೂ ಸಹಾ ನ್ಯಾಯಾಲಯದ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ನಾವುಗಳು ಮತ್ತು ಶಾಸಕರೆಲ್ಲರು ಮುಖ್ಯಮಂತ್ರಿಗಳಿಗೆ ಬೆಂಬಲವನ್ನು ನೀಡಿದ್ದೇವೆ ಅವರು ಸಮಸ್ಯೆಯನ್ನು ಪರಿಹಾರ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

Advertisement

ಕಾವೇರಿ ನೀರಿನ ವಿವಾದಕ್ಕೆ ಸಂಬAಧಪಟ್ಟAತೆ ಎರಡು ರಾಜ್ಯದವರ ಮಧ್ಯ ಕೇಂದ್ರ ಸರ್ಕಾರ ಪ್ರವೇಶವನ್ನು ಮಾಡುವುದರ ಮೂಲಕ ಈ ಸಮಸ್ಯೆಯನ್ನು ಪರಿಹಾರ ಮಾಡಬೇಕಿದೆ. ಡ್ಯಾಂನಲ್ಲಿ ನೀರಿಲ್ಲ ಆದರೂ ನೀರನ್ನು ಕೂಡಿ ಎಂದರೆ ಹೇಗೆ ಕಣ್ಣ ಮುಂದೆ ಡ್ಯಾಂನ ಚಿತ್ರಣ ಇದನ್ನು ಕೇಂದ್ರ ಸರ್ಕಾರ ಅರಿಯಬೇಕಿದೆ. ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳು ಏನೇ ನಿರ್ಧಾರವನ್ನು ತೆಗೆದುಕೊಂಡರು ಸಹಾ ನಮ್ಮ ಸ್ವಾಗತ ಇದೆ. ಎಂದ ಸಚಿವರು, ಬಂಗಾರಪ್ಪ ರವರು ಅಂದು ತೆಗೆದುಕೊಂಡಿದ್ದ ನಿರ್ಧಾರ ಐತಿಹಾಸಿಕವಾಗಿತ್ತು ಅದ ಮೇಲೆ ರಾಜ್ಯದಲ್ಲಿ ಬಹಳಷ್ಟು ಮುಖ್ಯಮಂತ್ರಿಗಳು ಬಂದರು ಹೋದರು ಅಗ ನೀರನ್ನು ಬಿಟ್ಟರು ಮತ್ತೇ ಕೆಲವರು ನ್ಯಾಯಾಲಯದ ಮೊರೆ ಹೋದರು, ಇಂದು ಸಹಾ ಇದರ ಬಗ್ಗೆ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ಬಂತರ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದರೆ ನಾವು ಅವರ ಕೈಜೋಡಿಸುವುದಾಗಿ ಮಧು ಬಂಗಾರಪ್ಪ ತಿಳಿಸಿದರು.

ರಾಜ್ಯದಲ್ಲಿ ಶಿಕ್ಷಕರ ಕೂರತೆ ಇರುವ ಕಡೆಯಲ್ಲಿ ಖಾಯಂ ಶಿಕ್ಷಕರ ಬದಲು ಅತಿಥಿ ಶಿಕ್ಷಕರನ್ನು ನೀಡಲಾಗಿದೆ, ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೂರತೆ ಇತ್ತು ಇದರಲ್ಲಿ 43 ಸಾವಿರ ಶಿಕ್ಷಕರನ್ನು ನೀಡಲಾಗಿದೆ. 10.500 ಶಿಕ್ಷಕರು ಆದೇಶವನ್ನು ಕಾಯುತ್ತಿದ್ದಾರೆ ಇದನ್ನು ನೀಡಲು ನ್ಯಾಯಾಲಯದ ಆದೇಶ ಬೇಕಿದೆ. ಅದು ತೀರ್ಮಾನವಾದ ಮೇಲೆ ಆದೇಶವನ್ನು ನೀಡಲಾಗುವುದು. ಈಗ 125 ದಿನದಲ್ಲಿ ಶಿಕ್ಷಣ ಇಲಾಖೆಗೆ ಸಂಬAಧಪಟ್ಟAತೆ ವಿವಿಧ ರೀತಿಯ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಮಕ್ಕಳಿಗೆ ಮೂರು ಸಲ ಪರೀಕ್ಷೆ ಪಠ್ಯ ಪರಿಷ್ಕರಣೆಯಂತಹ ಕೆಲಸವನ್ನು ಮಾಡಲಾಗಿದೆ ಇನ್ನು ಕೆಲವು ಬದಲಾವಣೆಯನ್ನು ಮಾಡಬೇಕಿದೆ ಅದಕ್ಕೆ ಕಾಲಾವಕಾಶ ಬೇಕಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಶೀಘ್ರವಾಗಿ ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪನೆ ಮಾಡಲಾಗುವುದು. ತಕ್ಷಣ ಉತ್ತಮವಾದ ಶಾಲೆಗಳನ್ನು ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ ಅದರಂತೆ ಶಾಶ್ವತವಾದ ಕಾರ್ಯವನ್ನು ಮಾಡುವಂತೆ ತಿಳಿಸಲಾಗಿದೆ ಎಂದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement