ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರವೂ ಮಳೆಯ ಆರ್ಭಟ ಮುಂದುವರಿದಿದೆ.. ನದಿಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶ ಗಳು ಜಲಾವೃತ ಗೊಂಡಿದೆ. ಕಡಲ್ಕೊರೆತ ತೀವ್ರ ಗೊಂಡಿದ್ದು, ಉಪ್ಪಳ ಮುಸೋಡಿ, ಕುಂಬಳೆ ಕೊಯಿಪ್ಪಾಡಿ ಮೊದಲಾದೆಡೆ ಹಲವು ಮನೆಗಳು ಅಪಾಯದಲ್ಲಿದ್ದು, ಹತ್ತಕ್ಕೂ ಅಧಿಕ ಮನೆಗಳು ಕುಸಿದಿವೆ.
ಪೈವಳಿಕೆ ಸಮೀಪದ ಚಿಪ್ಪಾರ್ ನ ಖಾಸಗಿ ಶಾಲೆಯೊಂದರ ಆವರಣ ಗೋಡೆ ಕುಸಿದು ಬಿದ್ದಿದೆ. ಗುಡ್ಡ ಜರಿದು ಬಿದ್ದಿದೆ. ಯಾವುದೇ ಅಪಾಯ ಉಂಟಾಗಿಲ್ಲ. ಉಪ್ಪಳ ಹೊಳೆಯ ಜೋಡುಕಲ್ಲು ಮಡಂದೂರು – ದೇರಂಬಳ ಸಂಪರ್ಕದ ಕಾಲ್ಸೇತುವೆ ಕುಸಿದು ಬಿದ್ದಿವೆ. ಇದರಿಂದ ಸಂಪರ್ಕ ಕಡಿದಿದೆ.
ಮಂಗಳೂರು: ವರುಣಾರ್ಭಟಕ್ಕೆ ಕಾಲೇಜಿನ ಮೇಲ್ಚಾವಣಿ ಕುಸಿತ; ತಪ್ಪಿದ ಅನಾಹುತ!
ಮಧು ವಾಹಿನಿ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಮಧೂರು ದೇವಸ್ಥಾನದ ಆವರಣ ದೊಳಗೆ ನೀರು ನುಗ್ಗಿದೆ. ಜಿಲ್ಲೆಯ ಎಲ್ಲಾ ನದಿ ಗಳು ಉಕ್ಕಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶದ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ . ಹಲವಾರು ಕಂಬಗಳು ಧರಶಾಯಿ ಯಾಗಿದೆ. ಹಲವೆಡೆ ಗುಡ್ಡಗಳು ಜರಿದು ಬಿದ್ದಿರುವುದ ರಿಂದ ರಸ್ತೆ ಸಂಪರ್ಕ ಅಸ್ತವ್ಯಸ್ತ ಗೊಂಡಿದೆ. ಮಳೆ ಹಿನ್ನಲೆ ಯಲ್ಲಿ ಜಿಲ್ಲೆಯ ಕಾಲೇಜು ಸೇರಿದಂತೆ ಶಾಲೆ ಗಳಿಗೆ ಮೂರನೇ ದಿನವಾದ ಇಂದು ಕೂಡಾ ರಜೆ ನೀಡಲಾಗಿದೆ.