ಬೆಂಗಳೂರು: ಕೆಲವು ಪ್ರದೇಶಗಳನ್ನು ಈಗಾಗಲೇ ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು, ಇದರ ನಡುವೆ ರಾಜ್ಯದ ಜನರಿಗೆ ಸರ್ಕಾರ ಕುಡಿಯುವ ನೀರಿನ ತೆರಿಗೆ ಹೆಚ್ಚಿಸುವ ಮೂಲಕ ಶಾಕ್ ನೀಡಿದೆ.
ಡಿ. 21 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗಾರಿಕೆಗಳಿಗೆ ನೀಡುವ ನೀರಿನ ಜೊತೆಗೆ ಗೃಹ ಬಳಕೆ ನೀರಿಗೂ ಟ್ಯಾಕ್ಸ್ ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಹೊಸ ತೆರಿಗೆ ಪ್ರಕಾರ ಗೃಹ ಬಳಕೆ ನೀರಿಗೆ ಪ್ರತಿ MCFT ಗೆ 320 ರೂ. ಟ್ಯಾಕ್ಸ್ ಹೆಚ್ಚಳವಾಗಿದ್ದು, ಇದರೊಂದಿಗೆ ಕೈಗಾರಿಕೆಗಳಿಗೆ ಪ್ರತಿ MCFT ಗೆ 3 ಲಕ್ಷ ರೂ. ಟ್ಯಾಕ್ಸ್ ಹೆಚ್ಚಳವಾಗಲಿದೆ.
ರಾಜ್ಯ ಬರ ಪರಿಸ್ಥಿತಿ ಎದುರಿಸುತ್ತಿದ್ದರು, ಗೃಹ ಉಪಯೋಗಿ ನೀರು ಬಳಕೆಗೆ ಟ್ಯಾಕ್ಸ್ ಹೆಚ್ಚಿಸುವ ಮೂಲಕ ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರಕಾರ ಯೋಜನೆ ಹಾಕಿದೆ ಎಂದು ವಿರೋಧ ಪಕ್ಷದಿಂದ ಆರೋಪ ವ್ಯಕ್ತವಾಗಿದೆ.