ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಿರಂತರವಾಗಿ ಚೀತಾಗಳು ಸಾವನ್ನಪ್ಪುತ್ತಿವೆ. ಇದೀಗ ಉದ್ಯಾನವನದಲ್ಲಿ ಹೆಣ್ಣು ಚಿರತೆ ‘ಧಾತ್ರಿ’ ಶವವಾಗಿ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿಯಲು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಪ್ರಾಜೆಕ್ಟ್ ಚೀತಾ ಎಂದು ಕರೆಯಲ್ಪಡುವ ಮಹತ್ವಾಕಾಂಕ್ಷೆಯ ಉಪಕ್ರಮದ ಭಾಗವಾಗಿ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ 20 ಚಿರತೆಗಳನ್ನು ಆಮದು ಮಾಡಿಕೊಳ್ಳಲಾದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯ ಸಾವಿನ ಸರಣಿಯಲ್ಲಿ ಇದು ಕೂಡ ಒಂದು.
ಸುಮಾರು ಏಳು ದಶಕಗಳ ಹಿಂದೆ ದೇಶದಲ್ಲಿ ಅಳಿವಿನಂಚಿನಲ್ಲಿರುವ ಚೀತಾಗಳ ರಕ್ಷಣೆ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಈ ಯೋಜನೆಯನ್ನು ಮಾಡಲಾಗಿತ್ತು. ಇದರೊಂದಿಗೆ ಇದುವರೆಗೆ ಒಟ್ಟು 9 ಚೀತಾಗಳು ಸಾವನ್ನಪ್ಪಿವೆ. ಒಟ್ಟಾರೆ ಮರಣೋತ್ತರ ಪರೀಕ್ಷೆಯ ಬಳಿಕ ಚೀತಾ ಸಾವಿಗೆ ಕಾರಣ ಹೊರ ಬೀಳಲಿದೆ
				
															
                    
                    
                    
                    
































