ಬೆಂಗಳೂರು: ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಸಚಿವ ಕೆಜೆ ಜಾರ್ಜ್ ಟಾಂಗ್ ಕೊಟ್ಟಿದ್ದಾರೆ.
ಕರ್ನಾಟಕ ಭವನದಲ್ಲಿ ಮಾತನಾಡಿದ ಅವರು, ‘ನಾನೊಬ್ಬ ಕ್ರಿಶ್ಚಿಯನ್ ಆಗಿದ್ದು, ಧರ್ಮಸ್ಥಳದಲ್ಲಿ ಆಣೆ ಮಾಡಿದರೆ ಯಾರು ನಂಬುತ್ತಾರೆ?’ ಎಂದು ಕುಟುಕಿದ್ದಾರೆ.
‘ಆತ್ಮಸಾಕ್ಷಿಯೇ ನನ್ನ ದೇವರು, ಅದರ ಆಣೆಗೂ ನಾನು ಯಾವುದೇ ಹಣ ಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದ ಜಾರ್ಜ್, ‘ಆಪಾದನೆಗೆ ದಾಖಲೆಗಳಿದ್ದರೆ ನೀಡಲಿ’ ಎಂದು ಅವರು ಎಚ್ಚಿಕೆಗೆ ಸವಾಲು ಹಾಕಿದ್ದಾರೆ.