ಚಿತ್ರದುರ್ಗ:ಶಾಲೆಗೆ ಹೋಗದೆ ಕುರಿ ಕಾಯುತ್ತಿದ್ದ ಬಾಲಕನನ್ನು ಸಿಎಂ ಸಿದ್ದರಾಮಯ್ಯ ಮರಳಿ ಶಾಲೆಗೆ ಸೇರ್ಪಡೆಗೊಳಿಸಿದ ಸನ್ನಿವೇಶವೊಂದು ನಡೆದಿದೆ.
ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ 11 ವರ್ಷದ ಬಾಲಕ ಯೋಗೀಶ್ . ಶಾಲೆ ಬಿಟ್ಟು ಕುರಿಕಾಯಲು ಹೋಗುತ್ತಿದ್ದ ಹೀಗಾಗಿ ಗ್ರಾಮದ ಮಹೇಂದ್ರ ಎಂಬ ಯುವಕ ಸಿಎಂ ಎಕ್ಸ್ (ಟ್ಟಿಟ್ಟರ್) ಖಾತೆಗೆ ಟ್ಯಾಗ್ ಮಾಡಿ ಈ ವಿಚಾರ ತಿಳಿಸಿದ್ದಾರೆ. ಸಿಎಂ ಕಾರ್ಯಾಲಯ ತಕ್ಷಣ ಇದನ್ನ ಪರಿಗಣಿಸಿ ಕೇವಲ 23 ಗಂಟೆಯಲ್ಲಿ ಇದರ ಬಗ್ಗೆ ಕ್ರಮ ವಹಿಸಿ ಬಾಲಕ ಮರಳಿ ಶಾಲೆಗೆ ಹೋಗುವಂತೆ ಮಾಡಿದೆ.
ಕಳೆದ 2 ವರ್ಷದಿಂದ ಯೋಗೀಶ್ ಶಾಲೆಗೆ ಹೋಗದೆ ಕುರಿಕಾಯಲು ತೆರಳುತ್ತಿದ್ದ. ಹೀಗಾಗಿ ಕುರಿ ಕಾಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ಶಿಕ್ಷಣ ಇಲಾಖೆ ಸಿಬ್ಬಂದಿಗಳು ಮತ್ತೆ ಶಾಲೆಗೆ ಬಾಲಕನ್ನು ಕರೆ ತಂದಿದ್ದಾರೆ. ಈಗ ಬಾಲಕನಿಗೆ ಸರ್ಕಾರಿ ಬಸಾಪುರ ಗ್ರಾಮದ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದಲು ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ.