ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.
ವಚನ: :
: ಭವಿಜನ್ಮವ ಕಳದು ಭಕ್ತನ ಮಾಡಿದರಯ್ಯ.
ಪಂಚಭೂತದ ಪ್ರಕೃತಿಯ ಕಳದು ಪ್ರಸಾದಕಾಯವ ಮಾಡಿದರಯ್ಯ.
ಅಂಗೇಂದ್ರಿಯಂಗಳ ಕಳದು ಲಿಂಗೇಂದ್ರಿಯಂಗಳ ಮಾಡಿದರಯ್ಯ.
ಅಂಗವಿಷಯಭ್ರಮೆಯಂ ಕಳದು
ಲಿಂಗವಿಷಯಭ್ರಾಂತನ ಮಾಡಿದರಯ್ಯ.
ಅಂಗಕರಣಂಗಳ ಕಳದು
ಲಿಂಗಕರಣಂಗಳ ಬೆಸಸುವಂತೆ ಮಾಡಿದರಯ್ಯ.
ಕುಲಸೂತಕ ಛಲಸೂತಕ ತನುಸೂತಕ ನೆನವುಸೂತಕ ಭಾವಸೂತಕ
ಇಂತೀ ಸೂತಕವೆಂಬ ಭ್ರಾಂತನು ಬಿಡಿಸಿ
ನಿಭ್ರಾಂತನ ಮಾಡಿ ರಕ್ಷಿಸಿದ ಶ್ರೀಗುರುದೇವಂಗೆ
ನಮೋ ನಮೋ ಎಂಬೆನಯ್ಯ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಶಿವಸಾಕ್ಷಿಯಾಗಿ.
-ಕುಷ್ಟಗಿ ಕರಿಬಸವೇಶ್ವರ