ಕುಸ್ತಿ ಫೆಡರೇಷನ್ ಚುನಾವಣಾ ಕಣದಿಂದ ಬ್ರಿಜ್ ಭೂಷಣ್ ಹೆಸರು ಔಟ್

ಹೊಸದಿಲ್ಲಿ :ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬಿಜೆಪಿ ಸಂಸದ , ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಹೆಸರನ್ನು ಆಗಸ್ಟ್ 12ರಂದು ನಡೆಯುವ ಕುಸ್ತಿ ಫೆಡರೇಷನ್‌ ಚುನಾವಣಾ ಕಣದಿಂದ ಕೈಬಿಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಅಲ್ಲದೇ ಬ್ರಿಜ್‌ ಭೂಷನ್‌ ಅವರ ಕಿರಿಯ ಪುತ್ರ ಉತ್ತರ ಪ್ರದೇಶ ಕುಸ್ತಿ ಸಂಘದ ಅಧ್ಯಕ್ಷರಾಗಿರುವ ಕರಣ್ ಅವರ ಹೆಸರುನ್ನು ಅಂತಿಮ ಪಟ್ಟಿಯಲ್ಲಿ ಕೈಬಿಡಲಾಗಿದೆ ಎಂದು ಉನ್ನತ ಮೂಲ ತಿಳಿಸಿದೆ. ಚುನಾವಣಾ ಅಧಿಕಾರಿ ನಿವೃತ್ತ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಅವರು ಅರ್ಹ ಮತದಾರರ ಪಟ್ಟಿಯನ್ನು ಅಂತಿಮಪಡಿಸಲಾಗಿದೆ.
ರಾಜ್ಯ ಸಂಘವನ್ನು ಪ್ರತಿನಿಧಿಸಬೇಕಿದ್ದ ಇವರಿಬ್ಬರ ಬದಲಾಗಿ ಪ್ರೇಮ್ ಕುಮಾರ್ ಮಿಶ್ರಾ ಮತ್ತು ಸಂಜಯ್ ಸಿಂಗ್ ಮತದಾನ ಮಾಡಲಿದ್ದಾರೆ.

ಆದರೆ ಬಿಹಾರ ಕುಸ್ತಿ ಸಂಘದ ಅಧ್ಯಕ್ಷ ಹಾಗೂ ಬ್ರಿಜ್ ಭೂಷಣ್ ಅವರ ಅಳಿಯ ವಿಶಾಲ ಪ್ರತಾಪ್ ಸಿಂಗ್ ಹೆಸರು ಪಟ್ಟಿಯಲ್ಲಿದೆ. ರಾಜ್ಯದ ಪರವಾಗಿ ವಿನಯ್ ಕುಮಾರ್ ಸಿಂಗ್ ಜತೆ ವಿಶಾಲ್ ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಬ್ರಿಜ್‌ ಭೂಷಣ್‌ ಅವರ ಹುದ್ದೆಗೆ ಈ ಇಬ್ಬರು ಉತ್ತರಾಧಿಕಾರಿಗಳು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ತಂದೆ- ಮಗನ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದರಿಂದ ಭಾರತೀಯ ಕುಸ್ತಿ ಒಕ್ಕೂಟದಲ್ಲಿ ಬಿಜೆಪಿ ಮುಖಂಡನ ಯುಗ ಕೊನೆಗೊಳ್ಳಲಿದೆ ಎಂಬ ಮಾತು ಕೇಳಿಬರುತ್ತಿದೆ.

Advertisement

ಅಲ್ಲದೇ ನಾನಾವತಿ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿದ್ದ, ಬ್ರಿಜ‌ ಭೂಷಣ್‌ ಅವರ ಬೆಂಬಲಿಗನಾದ ರಾಜಸ್ಥಾನದ ಲೊಚಾಬ್, ಗುಜರಾತ್ ಕುಸ್ತಿ ಸಂಘದ ಆಡಳಿತ ಮಂಡಳಿ ಸದಸ್ಯರಲ್ಲ. ಡಬ್ಲ್ಯುಎಫ್ಐ ನಿಯಮಾವಳಿ ಪ್ರಕಾರ ರಾಜ್ಯ ಸಂಘಗಳ ಆಡಳಿತ ಮಂಡಳಿ ಸದಸ್ಯರು ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆದರೆ ಲೊಚಾಬ್ ಅವರಿಗೆ ಗುಜರಾತ್‌ ಮತ ಚಲಾಯಿಸಲು ಹೇಗೆ ಅರ್ಹತೆ ಸಿಕ್ಕಿದೆ ಎಂಬ ಕೂತೂಹಲ ಹುಟ್ಟು ಹಾಕಿದೆ. 2023 ರಿಂದ 2026ರ ಅವಧಿಯ ಪದಾಧಿಕಾರಿ ಹುದ್ದೆಗಳಿಗೆ ಸ್ಪರ್ಧಿಸಲು ಅರ್ಹತೆ ಪಡೆದವರ ಪಟ್ಟಿಯಲ್ಲಿ ಕೆಲ ಕುತೂಹಲಕರ ಹೆಸರುಗಳು ಕಂಡುಬಂದಿವೆ ಎನ್ನಲಾಗುತ್ತಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement