ಬೆಂಗಳೂರು : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಅಧಿಕಾರಿಗಳು ಮತ್ತು ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ :
ಒಟ್ಟು ಹುದ್ದೆಗಳು : 945 (ಇದರಲ್ಲಿ 273 ಹುದ್ದೆಗಳನ್ನು ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ).
ಕೃಷಿ ಅಧಿಕಾರಿಗಳ ಹುದ್ದೆ – 128
ಸಹಾಯಕ ಕೃಷಿ ಅಧಿಕಾರಿ – 817
ವಿದ್ಯಾರ್ಹತೆ :
ಕೃಷಿ ವಿಜ್ಞಾನ ವಿಷಯ ಅಥವಾ ಬಯೋಟೆಕ್ನಾಲಾಜಿ ಅಥವಾ ಆಗಾರ ಮತ್ತು ವಿಜ್ಞಾನ ಹಾಗು ತಂತ್ರಜ್ಞಾನದಲ್ಲಿ ಬಿಎಸ್ಸಿ, ಬಿಟೆಕ್ ಪದವಿಯನ್ನು ಹೊಂದಿರಬೇಕು.
ವಯೋಮಿತಿ :
ಕನಿಷ್ಠ – 18 ವರ್ಷ ವಯಸ್ಸು
ಗರಿಷ್ಠ – 38 ವರ್ಷ ವಯಸ್ಸು
ವಯೋಮಿತಿ ಸಡಿಲಿಕೆ :
*ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ – 5 ವರ್ಷ
* ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – 3 ವರ್ಷ
* ವಿಕಲಚೇತನ ಮತ್ತು ವಿಧವಾ ಅಭ್ಯರ್ಥಿಗಳಿಗೆ – 10 ವರ್ಷ
ಅರ್ಜಿ ಶುಲ್ಕ :
* ಪ.ಜಾ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ
* ನಿವೃತ್ತ ಸೇವಾಧಾರರಿಗೆ 50 ರೂ.
* ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳಿಗೆ 300 ರೂ.
* ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ.
ಪ್ರಮುಖ ದಿನಾಂಕ :
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : ಅಕ್ಟೋಬರ್ 7
ಅರ್ಜಿ ಸಲ್ಲಿಕೆಗೆ ಕಡೆಯ ದಿನ : ನವೆಂಬರ್ 7
ಅಧಿಕೃತ ವೆಬ್ಸೈಟ್ :
https://kpsconline.karnataka.gov.in