ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಜೋಡಣೆ..! ಇಲ್ಲಿದೆ ಮಹತ್ವದ ಮಾಹಿತಿ..!

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಿಂದ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಯಡಿ ಬರುವ ಎಲ್ಲಾ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಬಳಕೆ ಮಾಡುವ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಲಿಂಕ್ ಮಾಡಲು ಸೂಚನೆ ನೀಡಲಾಗಿತ್ತು, ಇದರಂತೆ ಕಳೆದ ಕೆಲವು ದಿನಗಳಿಂದ ರಾಜ್ಯದ್ಯಂತ ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್ ಮಾಡುವ ಕಾರ್ಯ ನಡೆಯುತ್ತಿದೆ.

ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಲಿಂಕ್ ಕುರಿತು ಉಪಯುಕ್ತ ಮಾಹಿತಿ ವಿವರ ಹೀಗಿದೆ:

1) ಪಹಣಿ/RTC/ಉತಾರ್ ನಲ್ಲಿರುವ ಹೆಸರಿನ ವ್ಯಕ್ತಿಯು ಮರಣ ಹೊಂದಿದ್ದರೆ ಆರ್ ಆರ್ ಸಂಖ್ಯೆ/ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್ ಹೇಗೆ ಮಾಡುವುದು?

Advertisement

ಒಂದೊಮ್ಮೆ ಜಮೀನಿನ ಪಹಣಿ/RTC ಅಲ್ಲಿ ಹೆಸರಿರುವ ವ್ಯಕ್ತಿಯು ಮರಣ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಮರಣ ಹೊಂದಿರುವ ವ್ಯಕ್ತಿಯ ಮರಣ ಪ್ರಮಾಣ ಪತ್ರ(Death certificate)ವನ್ನು ಸಲ್ಲಿಸಿ ಪ್ರಸ್ತುತ ವಾರಸುದಾರರ ಆಧಾರ್ ಕಾರ್ಡಗೆ ಪಂಪ್ ಸೆಟ್ ಲಿಂಕ್ ಮಾಡಿಕೊಳ್ಳಬೇಕು.

2) ಸಾಗುವಳಿ ಮಾಡುತ್ತಿರುವ ಜಮೀನು ಜಂಟಿ ಖಾತೆ  ಹೊಂದಿದ್ದರೆ ಲಿಂಕ್ ಮಾಡುವುದು ಹೇಗೆ?

ರೈತರು ತಾವು ಸಾಗುವಳಿ ಮಾಡುತ್ತಿರುವ ಜಮೀನಿ ಜಂಟಿ ಖಾತೆ(Joint RTC) ಹೊಂದಿದ್ದ ಪಕ್ಷದಲ್ಲಿ ಛಾಪಾಕಾಗದವನ್ನು ತೆಗೆದುಕೊಂಡು ನಿಮ್ಮ ಜಂಟಿ ಖಾತೆ ಪಹಣಿ/RTC ಅಲ್ಲಿ ಬರುವ ಹೆಸರಿನವರ ಒಪ್ಪಿಗೆ ಪಡೆದು ಆಧಾರ್ ಕಾರ್ಡ ಲಿಂಕ್ ಮಾಡಿಸಿಕೊಳ್ಳಬೇಕು.

3) ಜಮೀನನ್ನು ಖರೀದಿ ಮಾಡಿದ್ದ ಸಮಯದಲ್ಲಿ ಲಿಂಕ್ ಮಾಡಿಕೊಳ್ಳುವುದು ಹೇಗೆ?

ಕೆಲವು ದಿನಗಳ ಹಿಂದೆಯಷ್ಟೆಯೇ ನಿವೇನಾದರು ಕೃಷಿ ಜಮೀನನ್ನು ಖರೀದಿ ಮಾಡಿದ್ದರೆ ಇದಕ್ಕೆ ಸಂಬಂಧಪಟ್ಟ ಕ್ರಯ ಪತ್ರಗಳನ್ನು ವಿದ್ಯುತ್ ಕಂಪನಿ ಕಚೇರಿಗೆ ಸಲ್ಲಿಸಿ ಆಧಾರ್ ಕಾರ್ಡ ಲಿಂಕ್ ಮಾಡಿಸಿಕೊಳ್ಳಬೇಕು.

ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್ ಎಲ್ಲಿ ಮಾಡಿಸಬೇಕು?

ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದ್ದು, ರೈತರು ತಮ್ಮ ಜಮೀನಿನಲ್ಲಿರುವ ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ್ (RR number adn adhar card link)ಅನ್ನು ಜೋಡಣೆ ಮಾಡಲು ನಿಮ್ಮ ಹಳ್ಳಿಯ ಲೈನ್ ಮ್ಯಾನ್ ಅನ್ನು ಸಂಪರ್ಕಿಸಬೇಕು ಅಥವಾ ನಿಮ್ಮ ಹತ್ತಿರದ ವಿದ್ಯುತ್ ಸರಬರಾಜು ಕಂಪನಿ(Escom)ಭೇಟಿ ಮಾಡಿ ಲಿಂಕ್ ಮಾಡಿಕೊಳ್ಳಬೇಕು.

 ಪಂಪ್ ಸೆಟ್ ಗೆ ಆಧಾರ್ ಲಿಂಕ್ ಮಾಡಲು ಒದಗಿಸಬೇಕಾದ ದಾಖಲೆಗಳು:

1) ಜಮೀನಿನ ಪಹಣಿ/ಉತಾರ್/RTC2) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ/Aadhar card3) ಪಂಪ್ ಸೆಟ್ ಆರ್.ಆರ್ ಸಂಖ್ಯೆ/Pumpset RR number

ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್ ಏಕೆ ಮಾಡಬೇಕು?

1) ಮುಖ್ಯವಾಗಿ ಆಧಾರ್ ಕಾರ್ಡ ಅನ್ನು ಪಂಪ್ ಸೆಟ್ ಗೆ ಲಿಂಕ್ ಮಾಡಲು ಮುಖ್ಯ ಉದ್ದೇಶ ನೈಜ ಫಲಾನುಭವಿಗಳಿಗೆಯೇ ಅಂದರೆ ಅರ್ಹ ವಕ್ತಿಗಳಿಗೆಯೇ ಕೃಷಿ ಪಂಪ್ ಸೆಟ್ ಗಳಿಗೆ ನೀಡುತ್ತಿರುವ ವಿದ್ಯುತ್ ಬಿಲ್ ಸಹಾಯಧನ ಪಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಲು.

2) ಅಕ್ರಮವಾಗಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪಡೆಯುತ್ತಿರುವುದನ್ನು ತಡೆಗಟ್ಟಲು.

3) ನಕಲಿ ದಾಖಲೆಗಳನ್ನು ಸಲ್ಲಿಸಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪಡೆಯುವುದನ್ನು ತಡೆಗಟ್ಟಲು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement