ಚಿಕ್ಕಮಗಳೂರು : ಓವರ್ ಲೋಡ್ ನಿಂದ ಸರ್ಕಾರಿ ಬಸ್ಸಿನ ಟಯರ್ ಪಂಕ್ಚರ್ ಆಗಿ ಬಸ್ ರಸ್ತೆ ಮಧ್ಯೆಯೇ ನಿಂತ ಘಟನೆ ಚಿಕ್ಕಮಗಳೂರಿನ ಮೂಡಿಗೆರೆಯ ಜಾವಳಿ ಬಳಿ ಸಂಭವಿಸಿದೆ.
60 ಸೀಟಿನ ಬಸ್ಸಿನಲ್ಲಿ 100ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದು ಹೆವಿ ಲೋಡ್ ನಿಂದ ಘಾಟಿಯಲ್ಲಿ ಸಂಚರಿಸಲಾಗದೇ ಟಯರ್ ಬ್ಲಾಸ್ಟ್ ಆಗಿ ರಸ್ತೆ ಮಧ್ಯೆ ನಿಂತಿತ್ತು. ಈ ಹಿನ್ನಲೆ ಬಸ್ ನಲ್ಲಿದ್ದ ಪ್ರಯಾಣಿಕರು ರಸ್ತೆಯ ಬದಿಯಲ್ಲೇ ಸಾಲಾಗಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು.
ಅದೇ ಸಮಯಕ್ಕೆ ಅದೇ ಮಾರ್ಗವಾಗಿ ತೆರಳುತ್ತಿದ್ದ ಶಾಸಕಿ ನಯನಾ ಮೋಟಮ್ಮ ಕಾರು ನಿಲ್ಲಿ ಜನರ ಸಮಸ್ಯೆ ಆಲಿಸಿ ಕೂಡಲೇ ಕೆ.ಎಸ್.ಆರ್.ಟಿ.ಸಿ ಡಿ ಸಿ ಗೆ ಫೋನ್ ಮಾಡಿ ಕೂಡಲೇ ಬಸ್ ಬಿಡುವಂತೆ ಸೂಚನೆ ನೀಡಿ ಒಂದು ವೇಳೆ ಬಸ್ ಬರದಿದ್ದರೆ ಫೋನ್ ಮಾಡಿ ಎಂದು ನಂಬರ್ ಕೊಟ್ಟು ಹೋದರು ಎನ್ನಲಾಗಿದೆ.