ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಕುಂಕುಮವಿಡಲ್ಲ, ತಿಲಕವಿಡಲ್ಲ ಎಂದು ಯಾರು ಹೇಳಿದ್ದು..? ಕೆಲ ಸಂದರ್ಭಗಳಲ್ಲಿ ಅಲರ್ಜಿ ಕಾರಣಕ್ಕೆ ನಿರಾಕರಿಸಿರಬಹುದು ಅಷ್ಟೇ. ಈಗ ನನಗೆ ಸುಗಂಧರಾಜ ಅಲರ್ಜಿ ಇದೆ. ಹಾಗಾಗಿ, ನಾನು ಸುಗಂಧರಾಜ ಮಾಲೆ ಹಾಕಲೇ ಬೇಡಿ ಎಂದು ಹೇಳಿಬಿಡುತ್ತೇನೆ.
ಹಾಗೆ ಕೆಲ ಸಂದರ್ಭದಲ್ಲಿ ಸಿಎಂ ಕುಂಕುಮ ನಿರಾಕರಿಸಿರಬಹುದು ಹೊರತು ಕುಂಕುಮ ಇಟ್ಟುಕೊಳ್ಳಲ್ಲ ಎನ್ನುವುದು ತಪ್ಪು ಎಂದು ಉಪ ಮುಖ್ಯಮಂತ್ರಿ ಸ್ಪಷ್ಟ ಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ತಿಲಕ ಇಟ್ಟುಕೊಳ್ಳದ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಹಲವು ಸಂದರ್ಭಗಳಲ್ಲಿ ಸಿಎಂ ಕುಂಕುಮ, ತಿಲಕ ಇಟ್ಟುಕೊಂಡಿದ್ದಾರೆ. ಆದರೆ, ಮಹಿಳೆಯರಂತೆ ದೊಡ್ದದಾಗಿ ಹಣೆತುಂಬ ಕುಂಕುಮ ಹಚ್ಚಿಕೊಳ್ಳಲ್ಲ ಅಷ್ಟೇ ಎಂದು ಹೇಳಿದರು.