ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡಲು ಅಕ್ಕಿ ದಾಸ್ತಾನು ಇರದ ಕಾರಣ, ಪ್ರತಿಯೊಬ್ಬರಿಗೂ ಐದು ಶೆಜಿ ಅಕ್ಕಿ ಹಾಗೂ ಐದು ಕೆಜಿಗೆ ಹಣವನ್ನು ಸರ್ಕಾರ ನೀಡುತ್ತಿದೆ. ಸದ್ಯ ಹೆಚ್ಚುವರಿ ಅಕ್ಕಿಗೆ
ಹಣದ ಬದಲಾಗಿ ಅಕ್ಕಿಯನ್ನು ನೀಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಹೌದು ಕೇಂದ್ರದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಸಂಪುಟವು
ರಚನೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಕುರಿತು ಮತ್ತೇ ಅಕ್ಕಿ ಪೂರೈಕೆ ಕುರಿತು ಪ್ರಯತ್ನಿಸಲಿದೆ ಎಂದು ಹೇಳಲಾಗಿದೆ. ಅಕ್ಕಿ ಖರೀದಿಗೆ ಕೇಂದ್ರಿಯ ಆಹಾರ ನಿಗಮವು ಅನುಮತಿ ನೀಡಬೇಕಿದೆ. ಇಲ್ಲವಾದಲ್ಲಿ ದುಬಾರಿ ಬೆಲೆಗೆ ಅಕ್ಕಿ ಖರೀದಿಸಬೇಕಾಗುತ್ತದೆ.