ಚಿತ್ರದುರ್ಗ: ಕೇಂದ್ರೀಯ ಸೈನಿಕ ಮಂಡಳಿಯಿಂದ ಶಿಷ್ಯವೇತನಕ್ಕೆ ಅರ್ಜಿ ಅಹ್ವಾನಿಸಲಾಗಿದೆ. ಕೇಂದ್ರಿಯ ಸೈನಿಕ ಮಂಡಳಿಯ ಜಾಲತಾಣ WWW.KSB.GOV.IN ದಲ್ಲಿ ಹವಾಲ್ದಾರ್ ರ್ಯಾಂಕ್‍ವರೆಗಿನ ಮಾಜಿ ಸೈನಿಕರ ಮಕ್ಕಳ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ವ್ಯಾಸಂಗ ಮಾಡುತ್ತಿರುವವರು 2023ರ ಅಕ್ಟೋಬರ್ 31 ರವರೆಗೆ ಹಾಗೂ ವೃತ್ತಿಪರ ಶಿಕ್ಷಣವಲ್ಲದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರು 2023ರ ನವೆಂಬರ್ 30 ರವರೆಗೆ ಆರ್ಥಿಕ ನೆರವು (ಪೈನಾನ್ಷಿಯಲ್ ಅಸಿಸ್ಟೆನ್ಸ್) ಎಂಬ ಶೀರ್ಷಿಕೆಯಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಜೆಸಿಓ ರ್ಯಾಂಕ್ ವರೆಗಿನ ಮಾಜಿ ಸೈನಿಕರ ಮಕ್ಕಳು ದ್ವಿತೀಯ ಪಿಯುಸಿಯಲ್ಲಿ 60 ಪ್ರತಿಶತಕ್ಕಿಂತ ಅಧಿಕ ಅಂಕಗಳನ್ನು ಪಡೆದು ವೃತ್ತಿಪರ ಶಿಕ್ಷಣದಲ್ಲಿ ಪದವಿ ವ್ಯಾಸಂಗಕ್ಕಾಗಿ ಪ್ರವೇಶಾತಿ ಪಡೆದ ಮೊದಲನೇ ವರ್ಷದಲ್ಲಿಯೇ ನವೆಂಬರ್ 30 ರೊಳಗಾಗಿ ಪ್ರಧಾನ ಮಂತ್ರಿ ಶಿಷ್ಯವೇತನ ಯೋಜನೆ (ಪ್ರಧಾನ ಮಂತ್ರಿ ಸ್ಕಾಲರ್ಷಿಪ್ ಸ್ಕೀಂ) ಎಂಬ ಶೀರ್ಷಿಕೆಯಡಿಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇವರ ದೂರವಾಣಿ ಸಂಖ್ಯೆ 08182-220925 ಗೆ ಕಚೇರಿ ವೇಳೆಯಲ್ಲಿ ಸಂಪರ್ಕಸಬಹುದಾಗಿದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ. ಹಿರೇಮಠ ಅವರು ಪ್ರಟಣೆಯಲ್ಲಿ ತಿಳಿಸಿದ್ದಾರೆ.