ನವದೆಹಲಿ: 2024 ರ ಸಾರ್ವತ್ರಿಕ ಚುನಾವಣೆ ಹಾಗೂ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ ನಟ ರಾಜ್ಕುಮಾರ್ ರಾವ್ ಅವರನ್ನು ರಾಷ್ಟ್ರೀಯ ಐಕಾನ್ ಆಗಿ ನೇಮಿಸಲು ಚುನಾವಣಾ ಆಯೋಗ ಮುಂದಾಗಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ರಾಷ್ಟ್ರೀಯ ಐಕಾನ್ ಆಗಿ ರಾಜ್ಕುಮಾರ್ ರಾವ್ ಅವರನ್ನು ನೇಮಿಸಿದ್ದು, ಅಕ್ಟೋಬರ್ 26, ಗುರುವಾರ ಈ ನಿಟ್ಟಿನಲ್ಲಿ ಔಪಚಾರಿಕ ಸಮಾರಂಭ ನಡೆಯಲಿದೆ ಎಂದು ಚುನಾವಣಾ ಸಂಸ್ಥೆ ಪ್ರಕಟಿಸಿದೆ. ಚುನಾವಣೆಯಲ್ಲಿ ಭಾಗಿಗಳಾಗಲು ಮತದಾರರನ್ನು ಪ್ರೇರೇಪಿಸಲು ರಾಷ್ಟ್ರೀಯ ಐಕಾನ್ಗಳನ್ನು ನೇಮಿಸಲಾಗಿದೆ.
ಇನ್ನು ಈ ಹಿಂದೆ, ನಟರಾದ ಪಂಕಜ್ ತ್ರಿಪಾಠಿ, ಅಮೀರ್ ಖಾನ್ ಮತ್ತು ಕ್ರೀಡಾ ಪಟುಗಳಾದ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಮತ್ತು ಎಂಸಿ ಮೇರಿ ಕೋಮ್ ಅವರನ್ನು ರಾಷ್ಟ್ರೀಯ ಐಕಾನ್ಗಳಾಗಿ ಗುರುತಿಸಲಾಗಿತ್ತು.
ಈ ತಿಂಗಳ ಆರಂಭದಲ್ಲಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಐದು ರಾಜ್ಯಗಳಾದ್ಯಂತ 161 ಮಿಲಿಯನ್ ಜನರು ಮತ ಚಲಾಯಿಸಲಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿತ್ತು.