ನವದೆಹಲಿ : ಲೋಕಸಭೆಯಲ್ಲಿ 2024-2025ರ ಸಾಲಿನ ಬಜೆಟ್ ಮಂಡನೆ ಮಾಡುತ್ತಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸರ್ವರಿಗೂ ಅನ್ವಯ ಆಗುವಂಥ ಬಜೆಟ್ ಮಂಡಿಸಲಾಗುತ್ತಿದೆ. ಮಧ್ಯಂತರ ಬಜೆಟ್ನಲ್ಲಿ ಗರೀಬ್, ಮಹಿಳಾ, ಯುವ, ಅನ್ನದಾತರಿಗೆ ಒತ್ತು ನೀಡಲಾಗಿತ್ತು. ಈಗಲೂ ಬಡವರಿಗೆ ಉಚಿತ ಪಡಿತರ ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಗರೀಬ್ ಕಲ್ಯಾಣ್ ಯೋಜನೆಯನ್ನ ವಿಸ್ತರಣೆ ಮಾಡಲಾಗಿದೆ. ಭಾರತದ ಆರ್ಥಿಕತೆ ಚೆನ್ನಾಗಿದ್ದು ಹಣದುಬ್ಬರ ನಿಯಂತ್ರಣದಲ್ಲಿದೆ. ಇದರಿಂದಾಗಿ ಗರೀಬ್ ಕಲ್ಯಾಣ್ ಯೋಜನೆಯನ್ನ ಮುಂದಿನ 5 ವರ್ಷದವರೆಗೆ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.
