ಕೇಂದ್ರ ಸರಕಾರ ರಾಜ್ಯಕ್ಕೆ ನೀಡಿದ ಕೊಡಿಗೆ ಏನು.?: ಸುರ್ಜೆವಾಲಾ.!

 

 

ಚಿತ್ರದುರ್ಗ: ಕೇಂದ್ರ ಸರ್ಕಾರ ಕರ್ನಾಟಕ ರಾಜವ್ಯ ಸರ್ಕಾರಕ್ಕೆ ಯಾವುದೇ ರೀತಿಯ ಸಹಾಯವನ್ನು ಮಾಡದೇ ಎಲ್ಲದಕ್ಕೂ ಸಹಾ ಚೆಂಬುನ್ನು ನೀಡಿದೆ ಇದಕ್ಕೆ ತಕ್ಕ ಪಾಠವನ್ನು ಈ ಚುನಾವಣೆಯಲ್ಲಿ ಕಲಿಸಬೇಕಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

Advertisement

ಚಿತ್ರದುರ್ಗ ನಗರದ ಖಾಸಗಿ ಹೋಟೇಲ್ನಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ಮೋದಿ ಸರ್ಕಾರ ಚೆಂಬು ನೀಡಿದೆ 27ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯದ ಬಗ್ಗೆ ಪ್ರಶ್ನಿಸದೆ ಚೆಂಬು ನೀಡಿದ್ದಾರೆ ಕಾಂಗ್ರೆಸ್ ರಾಜ್ಯದಲ್ಲಿ ನುಡಿದಂತೆ ಪಂಚ ಗ್ಯಾರಂಟಿ ಜಾರಿಗೊಳಿಸಿದೆ ಕೇಂದ್ರದಲ್ಲಿ ಗ್ಯಾರಂಟಿ ಯೋಜನೆ ತರುವುದಾಗಿ ಘೋಷಿಸಿದ್ದೇವೆ. ನಾವು ಜನ ಕಲ್ಯಾಣ ಗ್ಯಾರಂಟಿಗಳನ್ನು ಘೋಷಿಸಿದ್ದೇವೆ ಅಂಬಾನಿ, ಅದಾನಿ ಕಲ್ಯಾಣ ಗ್ಯಾರಂಟಿ ಅಲ್ಲ ರಾಜ್ಯದ ಸಿಎಂ ಸಿದ್ಧರಾಮಯ್ಯರಿಂದ ಸಮರ್ಥ ಆಡಳಿತ ಐದು ವರ್ಷ ಕಾಲ ಕಾಂಗ್ರೆಸ್ ಉತ್ತಮ ಆಡಳಿತ ನೀಡಲಿದೆ ಸಿಎಂ, ಡಿಸಿಎಂ, ಸಚಿವರು, ಶಾಸಕರು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದರು

ನಮ್ಮ ಮುಂದೆ ದೇಶದಲ್ಲಿ ಎರಡು ಮಾಡಲ್ಗಳಿವೆ ಒಂದು ಖರ್ಗೆ, ರಾಹುಲ್ ಗ್ಯಾರಂಟಿ ಮಾಡಲ್ ಮತ್ತೊಂದು ಚಂಬು ಮಾಡಲ್ ಎಂದು ಮೋದಿ ವಿರುದ್ಧ ಟೀಕಿಸಿ, ಜನರು ಚಂಬು ಮಾಡಲ್ ಬೇಕೋ, ಅಭಿವೃದ್ಧಿ ಮಾಡಲ್ ಬೇಕೋ ನಿರ್ಧರಿಸಲಿ ಎಂದು ಅವರು, ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಯಾವ ಸಮಯದಲ್ಲೂ ಸಹಾ ಸಹಾಯವನ್ನು ಮಾಡಿಲ್ಲ ಬರಗಾಲ ಬಂದಿದೆ ಎಂದು ಪರಿಹಾರವನ್ನು ನೀಡುವಂತೆ ಮನವಿ ಮಾಡಿದರು ಸಹಾ ಅದರ ಬಗ್ಗೆ ಮೋದಿಯವರು ಯಾವ ಮಾತನ್ನು ಆಡಿಲ್ಲ, ಜಿ.ಎಸ್.ಟಿ.ಯಲ್ಲಿ ನಮ್ಮ ಪಾಲನ್ನು ಸಹಾ ಸರಿಯಾದ ರೀತಿಯಲ್ಲಿ ನೀಡಲ್ಲ, ಬೇರೆ ರಾಜ್ಯಗಳಿಗೆ ಹೆಚ್ಚಿನ ರೀತಿಯ ಸಹಾಯವನ್ನು ಮಾಡುವ ಪ್ರಧಾನ ಮಂತ್ರಿಗಳು ಕರ್ನಾಟಕಕ್ಕೆ ಮಾತ್ರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ದೇಶದ ಎಲ್ಲರ ಖಾತೆಗಳಿಗೆ 15 ಲಕ್ಷ ರೂ, ಹಾಕುತ್ತೇವೆ ಎಂದು ಹೇಳಿದ್ದರು 10 ವರ್ಷ ಕಳೆದರೂ ಸಹಾ ಅದರ ಬಗ್ಗೆ ಮಾತಿಲ್ಲ, ಇದುವರೆವಿಗೂ ಯಾರ ಖಾತೆಗೂ ಸಹಾ ಹಣ ಬಂದಿಲ್ಲ, ರೈತರ ಆದಾಯವನ್ನು ಹೆಚ್ಚಿಗೆ ಮಾಡುತ್ತೇವೆ ಎಂದವರು ಆವರು ಭೂಮಿಗೆ ಹಾಕಿದ ಹಣವೂ ಸಹಾ ಬಾರದ ರೀತಿಯಲ್ಲಿ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ. ರಾಜ್ಯದಲ್ಲಿ ನೆರೆ ಬಂದಾಗಲೂ ಸಹಾ ಕೇಂದ್ರದಿಂದ ಯಾವ ಪರಿಹಾರವೂ ಸಹಾ ರಾಜ್ಯಕ್ಕೆ ಬಂದಿಲ್ಲ ಎಂದು  ಸುರ್ಜೆವಾಲಾ ಆರೋಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಟಿ.ಬಿ.ಜಯಚಂದ್ರ, ಮಾಜಿ ಸಚಿವರಾದ ಹೆಚ್.ಅಂಜನೇಯ, ಶಾಸಕರುಗಳಾದ ರಘುಮೂರ್ತಿ, ವಿರೇಂದ್ರಪಪ್ಪಿ, ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ, 2024ರ ಚಿತ್ರದುರ್ಗ ಕಾಂಗ್ರೆಸ್ ಲೋಕಸಬಾ ಅಭ್ಯರ್ಥಿ ಬಿ.ಎ.ಚಂದ್ರಪ್ಪ, ಮಾಜಿ ಶಾಸಕರಾದ ಶ್ರೀಮತಿ ಪೂರ್ಣಿಮಾ, ಎ.ವಿ.ಉಮಾಪತಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀಮತಿ ಜಯಮ್ಮ, ಡಿಸಿಸಿ ಅಧ್ಯಕ್ಷರಾದ ತಾಜ್ಪೀರ್, ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಮುಖಂಡರುಗಳಾದ ಹನುಮಲಿ ಷಣ್ಮುಖಪ್ಪ, ಜೆ.ಜೆ,ಹಟ್ಟಿ ತಿಪ್ಪೇಸ್ವಾಮಿ, ಮರುಳಾರಾಧ್ಯ, ಓ.ಶಂಕರ್, ಜಿ.ಎಸ್.ಮಂಜುನಾಥ್, ಸಂಪತ್ ಕುಮಾರ್, ಮೈಲಾರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಸೋಮಶೇಖರ್, ವಿಜಯಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement