ದೆಹಲಿ: ಕೇಂದ್ರ ಸರ್ಕಾರ ಮುಂದಿನ ವರ್ಷದ ಮಾರ್ಚ್‌ವರೆಗೆ ಈರುಳ್ಳಿ ರಫ್ತು ನಿಷೇಧಿಸಿದೆ. ದೇಶೀಯ ಲಭ್ಯತೆ ಹೆಚ್ಚಿಸಿ ಬೆಲೆ ನಿಯಂತ್ರಣದಲ್ಲಿ ಇರುವಂತೆ ಮಾಡಲು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ಅಧಿಸೂಚಿಸಿದೆ.
ಆದರೆ, ಮಳೆ ಕೊರತೆ ನಡುವೆಯೂ ಈರುಳ್ಳಿ ಬೆಳೆದ ರೈತರು ಮಾತ್ರ ಕಂಗಾಲಾಗಿದ್ದಾರೆ. ರಫ್ತು ನಿಷೇಧದಿಂದ ಬೆಲೆಯಲ್ಲಿ ಗಣನೀಯ ಕುಸಿತವಾಗಿ ರೈತರಿಗೆ ನಷ್ಟವಾಗಲಿದೆ. ಈರುಳ್ಳಿ ಆಹಾರ ಬೆಳೆಯಾಗಿ ಪರಿಗಣಿಸಿದ ಕೇಂದ್ರ, ರಫಿಗೆ ಏಕೆ ನಿಷೇಧ ಹಾಕಿದೆ ಎಂಬುದು ರೈತಾಪಿ ವರ್ಗದ ಪ್ರಶ್ನೆಯಾಗಿದೆಯಂತೆ.!