ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ಬರಲಿದೆಯಂತೆ ! ನೌಕರರ ತುಟ್ಟಿ ಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳವಾಗುತ್ತದೆ ಎಂದು ಎನ್ನಲಾಗಿದೆ.
ಜನವರಿ 31ರಂದು ನಿಗದಿಯಂತೆ ಭತ್ಯೆ ಹೆಚ್ಚಾದರೆ, ಇದು ಶೇ.50ಕ್ಕೆ ತಲುಪಲಿದೆ ಎಂಬುವುದು ಈವರೆಗಿನ ಅಂಕಿಅಂಶದಿಂದ ಸ್ಪಷ್ಟವಾಗಿದೆ. ಅಧಿಕೃತ ಅನುಮೋದನೆಯ ಬಳಿಕವೇ ಇದನ್ನು ಜಾರಿಗೆ ಮಾಡಲು ಸರ್ಕಾರ ಬರೋಬ್ಬರಿ 2 ತಿಂಗಳು ತೆಗೆದುಕೊಳ್ಳುತ್ತದೆ. ತುಟ್ಟಿ ಭತ್ಯೆ ವಾರ್ಷಿಕವಾಗಿ 2 ಬಾರಿ ಮಾಡುವುದು ಸಾಮಾನ್ಯವಂತೆ.!