ದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ಸಿಗಲಿದೆ. ವರದಿಗಳ ಪ್ರಕಾರ, ನೌಕರರ ತುಟ್ಟಿ ಭತ್ಯೆಯಲ್ಲಿ ಶೇ. 4ರಷ್ಟು ಹೆಚ್ಚಳವಾಗುವುದು ಖಚಿತವಾಗಿದೆ.
ಜ. 31ರಂದು ನಿಗದಿಯಂತೆ ಭತ್ಯೆ ಹೆಚ್ಚಾದರೆ, ಶೇ.50ರ ಗಡಿ ತಲುಪಲಿರುವುದು ಸ್ಪಷ್ಟವಾಗಿದೆ. ಅಲ್ಲದೆ, ಕೋವಿಡ್ ವೇಳೆಯ 18 ತಿಂಗಳ ಡಿಎ ಬಾಕಿ ಹಣದ ಬಿಡುಗಡೆಯ ಬಗ್ಗೆಯೂ ಪ್ರಸ್ತಾಪಿಸಲಾಗಿದೆ ಎಂದು ವರದಿಯಾಗಿದೆ.
ಅಧಿಕೃತ ಅನುಮೋದನೆಯ ಬಳಿಕ 2 ತಿಂಗಳಲ್ಲಿ ಜಾರಿಯಾಗುತ್ತದೆ. ತುಟ್ಟಿ ಭತ್ಯೆ ವಾರ್ಷಿಕವಾಗಿ 2 ಬಾರಿ ಮಾಡುವುದು ಗೊತ್ತೇ ಇದೆ.